ಕೊಲೆ ಬೆದರಿಕೆ ಆರೋಪದಲ್ಲಿ ಬಾಲಿವುಡ್ ನಟ ಆದಿತ್ಯ ಪಂಚೋಲಿ..!

ಕಾರ್ ರಿಪೇರಿ ಹಣ ನೀಡದೇ ಮೆಕ್ಯಾನಿಕ್ ಗೆ ಸತಾಯಿಸಿದ ಹಾಗೂ ಕೊಲೆ ಬೆದರಿಕೆ ಹಾಕಿದ ಬಾಲಿವುಡ್ ನಟ ಆದಿತ್ಯ ಪಂಚೋಲಿ ವಿರುದ್ದ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆದರೆ, ಆದಿತ್ಯ ಅವರು ಈ ಆರೋಪ ಅಲ್ಲ ಗಳೆದಿದ್ದಾರೆ. ನಾನು ಎಲ್ಲ ರೀತಿಯ ಪಾವತಿ ಮಾಡಿದ್ದೇನೆ. ದಾಖಲೆಯೂ ಇದೆ. ಆದರೂ ನನ್ನ ಕಾರನ್ನು ಒಂದು ವರ್ಷಗಳ ಕಾಲ ಇಟ್ಟುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಮುಂಬೈನ ವರ್ಸೋವಾ ಪೊಲೀಸ್ ಸ್ಟೇಷನ್ ನಲ್ಲಿ ಮೆಕ್ಯಾನಿಕ್ ದೂರಿತ್ತಿದ್ದು, ಹಣ ಕೇಳಿದ್ದಕ್ಕೆ ಆದಿತ್ಯ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿದ್ದಾರೆ.

ಕಾರ್ ರಿಪೇರಿ ಮಾಡಿದ್ದಕ್ಕಾಗಿ 2.80 ಲಕ್ಷ ರೂಪಾಯಿ ಪಾವತಿ ಮಾಡುವಂತೆ ಕಾರ್ ಮೆಕ್ಯಾನಿಕ್ ಆದಿತ್ಯ ಅವರನ್ನು ಒತ್ತಾಯಿಸಿದಾಗ, ಹಣ ಕೊಡದೇ ಆದಿತ್ಯ ಕೊಲೆ ಮಾಡುವುದಾಗಿ ಬೆದರಿಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾರ್ ರಿಪೇರಿ ಹಣ ನೀಡದೇ ಮೆಕ್ಯಾನಿಕ್ ಗೆ ಸತಾಯಿಸಿದ ಹಾಗೂ ಕೊಲೆ ಬೆದರಿಕೆ ಹಾಕಿದ ಬಾಲಿವುಡ್ ನಟ ಆದಿತ್ಯ ಪಂಚೋಲಿ ವಿರುದ್ದ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆದರೆ, ಆದಿತ್ಯ ಅವರು ಈ ಆರೋಪ ಅಲ್ಲ ಗಳೆದಿದ್ದಾರೆ. ನಾನು ಎಲ್ಲ ರೀತಿಯ ಪಾವತಿ ಮಾಡಿದ್ದೇನೆ. ದಾಖಲೆಯೂ ಇದೆ. ಆದರೂ ನನ್ನ ಕಾರನ್ನು ಒಂದು ವರ್ಷಗಳ ಕಾಲ ಇಟ್ಟುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಮುಂಬೈನ ವರ್ಸೋವಾ ಪೊಲೀಸ್ ಸ್ಟೇಷನ್ ನಲ್ಲಿ ಮೆಕ್ಯಾನಿಕ್ ದೂರಿತ್ತಿದ್ದು, ಹಣ ಕೇಳಿದ್ದಕ್ಕೆ ಆದಿತ್ಯ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿದ್ದಾರೆ. ಕಾರ್ ರಿಪೇರಿ ಮಾಡಿದ್ದಕ್ಕಾಗಿ 2.80 ಲಕ್ಷ ರೂಪಾಯಿ ಪಾವತಿ ಮಾಡುವಂತೆ ಕಾರ್ ಮೆಕ್ಯಾನಿಕ್ ಆದಿತ್ಯ ಅವರನ್ನು ಒತ್ತಾಯಿಸಿದಾಗ, ಹಣ ಕೊಡದೇ ಆದಿತ್ಯ ಕೊಲೆ ಮಾಡುವುದಾಗಿ ಬೆದರಿಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published.