ಬಿಗ್ ಬಾಸ್ ಮನೆಗೆ ಸುದೀಪ್ ಎಂಟ್ರಿ : ಕಿಚ್ಚಾ ತುಂಬಾ ನಗಾಡಿದ್ದು ಯಾವ ವಿಚಾರಕ್ಕೆ ಗೊತ್ತಾ..?
ಬಿಗ್ ಬಾಸ್ ಮನೆಯಲ್ಲಿ ಆರು ಜನ ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ.ಫಿನಾಲೆಗೆ ಇನ್ನೇನು ಒಂದೆರೆಡು ವಾರ ಬಾಕಿ ಇರಬಹುದು ಅಷ್ಟೇ. ಆದರೆ ನಿನ್ನೆ ಬಿಗ್ ಬಾಸ್ ಮನೆಗೆ ಕಿಚ್ಚಾ ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದು ನೋಡಿ ಸ್ಪರ್ಧಿಗಳು ಸಕತ್ ಖುಷಿಯಾಗಿ ಹೋದ್ರು.
ಮನೆಯ ಸ್ಪರ್ಧಿಗಳು ತಮ್ಮ ಪ್ರತಿಭೆಯಿಂದ ಸುದೀಪ್ ಅವರನ್ನು ಮನರಂಜಿಸಬೇಕು.. ಅದು 2 ನಿಮಿಷಗಳ ಕಾಲಾವಕಾಶ ಮಾತ್ರ ಇರುತ್ತದೆ. ಡೈಲಾಗ್ ಮಾಸ್ಟರ್ ಧನರಾಜ್.. ರಾಜಕುಮಾರ್ ಡೈಲಾಗ್ ಹೊಡೆಯುವ ಮೂಲಕ ಸುದೀಪ್ ಅವರಿಗೆ ಖುಷಿ ಪಡಿಸಿದರು.
ಹೆಲ್ಮೆಟ್ ಹಾಕದೆ ಗಾಡಿ ಓಡಿಸುತ್ತಿದ್ದ ಆಂಡಿಗೆ ಆಕ್ಸಿಡೆಂಟ್ ಆದಾಗ ಬುದ್ದಿ ಕಲಿತುಕೊಂಡ ಆಕ್ಟಿಂಗ್ ಆಂಡಿ ಮಾಡುತ್ತಾರೆ. ಹೆಲ್ಮೆಟ್ ಹಾಕಿಕೊಳ್ಳುವ ಒಳ್ಳೆ ಸಂದೇಶ ನೀಡಿದರು ಆಂಡಿ
ರಶ್ಮಿ ‘ ಅಮ್ಮಾ ನಿನ್ನಾ ಎದೆಯಾಳಾದಲ್ಲಿ’ ಹಾಡು ಹಾಡಿದ್ರೆ, ನವೀನ್ ಅವರು ‘ ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೀರಿ’ ಸಾಂಗ್ ಹಾಡಿದರು.
ಶಶಿ ಜಾನಪದ ಹಾಡು ‘ ಉಗೆ ಉಗೆ ‘ ಹಾಡಿದರು..
ಇನ್ನೂ ಕೃಷ್ಣ – ರಾಧೆಯ ಭೇಟಿಯ ಸಂದರ್ಭವನ್ನು ಕವಿತಾ ನಾಟ್ಯದ ಸನ್ನೆಗಳಲ್ಲಿ ತಿಳಿಸುವ ಮೂಲಕ ಸುದೀಪ ರಂಜಿಸಿದರು.
ಸುದೀಪ್ ಅವರು ಕೂಡ ಗಿಟಾರ್ ನುಡಿಸಿ ಹಾಡು ಹಾಡ್ತಾಯಿದ್ದರೆ ಸ್ಪರ್ಧಿಗಳು ಇಂಪಾದ ಅನುಭವನ್ನು ಅಸ್ವಾಧಿಸಿದರು.. ಜೊತೆಗೆ ಸ್ಪರ್ಧಿಗಳು ಮಾಡಿದ ಅಡುಗೆಯನ್ನು ಟೇಸ್ಟ್ ಮಾಡಿದರು.
ಅಂದ ಹಾಗೆ ಸುದೀಪ್ ಅವರು ಬಿದ್ದು ಬಿದ್ದು ನಗಾಡಿದ ವಿಚಾರ ಯಾವುದು ಗೊತ್ತಾ..?
ಆಂಡಿ ಮೊನ್ನೆ ಹೇಳಿದ ಟಾಯ್ಲೆಟ್ ವಿಚಾರಕ್ಕೆ ಅವರು ತುಂಬಾ ನಗಾಡಿದ್ದಾರಂತೆ..