siddaganga Shri : ಶತಾಯುಶಿಯ ಸಾಧಕ ಬದುಕಿನ ಸಾರ್ಥಕ ನೋಟ…

ಅನ್ನದಾನಂ ಪರಂದಾನಂ ವಿದ್ಯಾದಾನಂಥಃ ಪರಂ

ಅನ್ನೇನ ಕ್ಷಣಿಕ ತೃಪ್ತಿರ್ಯ ಯಾಜೀವಂತು ವಿದ್ಯೆಯೆ

ಅನ್ನ & ವಿದ್ಯಾನಗಳೆರಡೂ ಶ್ರೇಷ್ಠದಾನಗಳು. ಇಂತಹದಕ್ಕೆ ಜೀವಂತ ಸಾಕ್ಷಿಯಾಗಿ ನಿಂತವರು ನಮ್ಮ ಸಿದ್ಧಲಿಂಗ ಯತಿವರ್ಯರು. ನಡೆದಂತೆ ನುಡಿ ಎಂಬುದು ಶರಣರ ವಾಣಿ. ಅಂತಹ ಶರಣರಲ್ಲಿ ಷಣ್ಮುಖಸ್ವಾಮಿಗಳು ದಾಸೋಹ ಅರ್ಥವನ್ನು ಅತ್ಯಂತ ಸ್ಟುಟವಾಗಿ ಈ ರೀತಿ ಹೇಳುತ್ತಾರೆ.

ಸೋಹಂ ಎಂದಡೆ ಅಂತರಂಗದ ಗರ್ವ

ಶಿವೋಹಂ ಎಂದಡೆ ಬಹರಂಗದ ಅಹಂಕಾರ

ಈ ಉಭಯವನಳಿದು ದಾಸೋಹಂ ಭಾವವನೆ ಕರುಣಿಸಿ

ಬದುಕಿಸಯ್ಯಾ ಅಖಂಡೇಶ್ವರಾ

ಇಲ್ಲಿ ಇದರರ್ಥ ಇಷ್ಟೇ ನಾನು ಎಂಬ ಅಹಂಕಾರ ತೊಲಗಿ ನಾನು ನಿನ್ನದಾಸ ಎಂದು ಕ್ರಿಯಾತತ್ಪರನಾಗುವದೇ ದಾಸೋಹಂ ಭಾವ. ಅಂದರೆ ತನಗಾಗಿ ಅಂದರೆ, ತನಗೆ ಬೇಕಾದಷ್ಟನ್ನು ಮಾತ್ರ ಇಟ್ಟುಕೊಂಡು, ಮಿಕ್ಕದ್ದನ್ನು ಸಮಾಜದ ಒಳ್ಳೆಯ ಕೆಲಸಕ್ಕೆ ಅಂದರೆ ಉಳ್ಳವರು ಅವಶ್ಯಕತೆ ಇರುವವರಿಗೆ ಹಂಚಿಬಿಡುವ ಸುಂದರ ಭಾವವೇ ದಾಸೋಹ.

ದಾಸೋಹ ಪದಕ್ಕೆ ಪರ್ಯಾಯ ಪದ ಅಸಂಗ್ರಹ ತತ್ವ. ಅದನ್ನೇ ಬಸವಣ್ಣನವರು ಈ ರೀತಿ ಹೇಳುತ್ತಾರೆ :

ಹೊನ್ನಿನೊಳಗೊಂದೊರೆಯ, ಸೀರೆಯೊಳ ಗೊಂದೆಳೆಯ

ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣಿ !

ನಿಮ್ಮ ಪುರಾತನರಾಣಿ

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯ ಕೂಡಲಸಂಗಮದೇವ

ಎಂದು ಹೇಳುತ್ತಾ ಶರಣ ಧರ್ಮದ ಸರ್ವಶ್ರೇಷ್ಠ ಕ್ರಿಯೆಗಳನ್ನು ಈ ರೀತಿ ಹೇಳುತ್ತಾರೆ ಗುರುದರ್ಶನ, ಲಿಂಗಪೂಜೆ, ಜಂಗಮ ದಾಸೋಹ ಇಂತಹ ಮೂರನ್ನು ಅತ್ಯಂತ ನಿಷ್ಠವಾಗಿ ಮಾಡುತ್ತಾ ಇಷ್ಟು ವರ್ಷ ಸಾಧಕ ಜೀವನ ಸಾಗಿಸಿದ್ದಾರೆ. ಸಿದ್ಧಲಿಂಗ ಯತಿಗಳು.

ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

ಚಿತ್ತ ಶುದ್ಧವಲ್ಲ ಕಾಯಕವ ಮಾಡುವಲ್ಲಿ

ಸದ್ಭಕ್ತರಿಗೆ ಎತ್ತ ನೋಡಿದಡತ್ತ ಲಿಷ್ಟೇ ತಾನಾಗಿಪ್ಪಳು

ಮಾರಯ್ಯಪ್ರಾಯ ಅಮರೇಶ್ವರಲಿಂಗದ ಸೇವೆಯುಳ್ಳನಕ್ಕ.

ಎಂಬಂತೆ ತಾವು ಅಧಿಕಾರ ವಹಿಸಿಕೊಂಡಂದಿನಿಂದ ಸತ್ಯಶುದ್ಧ ಕಾಯಕ ದಾಸೋಹ ಸೇವೆಯಲ್ಲಿ ತಾವೂ ಬೆಳೆದರು ಮಠವನ್ನು ಬೆಳೆಸಿವರು ಅನ್ನದಾಸೋಹದೊಂದಿಗೆ, ಜ್ಞಾನದಾಸೋಹವನ್ನು ಅವಿರತವಾಗಿ ಮಾಡುತ್ತಾ, ನಡೆದಾಡುವ ದೇವರಾಗಿದ್ದರು ಯತಿಶ್ರೀಗಳು.

ಶರಣರ ವಿಶ್ವಮಾನ್ಯ ತತ್ವಗಳಾದ ಕಾಯಕ & ದಾಸೋಹದ ಮೂಲಕ ಈಯುಗದಲ್ಲೂ ಸಾಮಾಜಿಕ ಪ್ರಗತಿಯನ್ನು ಮಾಡುತ್ತಾ ಜಾತ್ಯಾತೀತವನ್ನು ಮಾಡಿ-ತೋರಿಸುತ್ತಿದ್ದಾರೆ ಅಂದರೆ, ನಾನೆಂಬ ಗರ್ವವ ಕಿತ್ತೊಗೆದು, ಕಾಯಕ ತತ್ವದಿಂದು, ದಾಸೋಹಯೋಗವನ್ನು ಶುದ್ಧ ಮನಸ್ಸಿನಿಂದ ಸಮಾಜಕ್ಕೆ ಉಣಬಡಿಸುತ್ತಿದ್ದರು.

ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ

ಮರ ದೇವರು ದೇವರಲ್ಲ ಪಂಚ ಲೋಹದಲ್ಲಿ ಮಾಡಿದ ದೇವರು ದೇವರಲ್ಲ

ಸೇತು ರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಠಿ

ಕೋಟಿ ಪುಣ್ಯಕ್ಷೇತ್ರಗಳಲ್ಲಿನ ದೇವರು ದೇವರಲ್ಲಿ ತನ್ನ ತಾನರಿದು ತಾನಾರೆಂಬುದು

ತಿಳಿದಡೆ ತಾನೇ ದೇವನೋಡಾ ಅಪ್ರಮಾಣ ಕೂಡಲಸಂಗಮದೇವ

ಇಲ್ಲಿ ತನ್ನ  ತಾನರಿದ ಅರೀವಿನ ಸಂಪದ್ಭರಿತ ಸಂನ್ಯಾಸತ್ವವನ್ನು ಅಂದರೆ ನಾನೆಂಬ ಅಹಂಕಾರವಳಿದ ನಿಜಯೋಗಿಯ ಸ್ಥಿತಿಯವರದು. ಸರ್ವಸಮಾನತೆಯ ಸಮಾಜವಾದಿತ್ವದ, ಸುಧಾರಣೆಯ ಸಮಾಜ ಲಕ್ಷಣವನ್ನು ಅವರು ಹೊಂದಿದ್ದರು.

ದಾಸೋಹ ಎಂದರೆ ಕೇವಲ ನೀಡುವದೆಂದರ್ಥವಲ್ಲ. ಬದಲಿಗೆ ಮಾಡುವು ನೀಡುವ ಅರ್ಹತೆಗಳೆರಡೂ ವ್ಯಕ್ತಿಗಳಿರಬೇಕು ಅಂದರೆ, ಆರ್ಥಿಕತೆಯನ್ನು ಪಡೆದು ಅತ್ಯಂತ ನಿಷ್ಠ & ಯೋಗ್ಯವಾಗಿ ಸಮಾಜಕ್ಕೆ & ಅದರ ಏಳ್ಗೆಗೆ ನೀಡುವ ಅರ್ಹತೆ ಅವನಿಗಿರಬೇಕು.

ಇಂಗ್ಲೀಷನಲ್ಲಿ ಒಂದು ಮಾತು ಇದೆ.

“ A beautiful Life, Does not just happen It’s built daily with

love, laughter, sacrifice, patience, grace & forgiveness”

ಅಂದರೆ ಪ್ರೀತಿ, ನಗು, ತ್ಯಾಗ, ಸಹನೆ, ಸೌಜನ್ಯ, ಕ್ಷೇಮ, ಮುಗ್ದತೆಯೇ ಮನುಷ್ಯನನ್ನು ಎತ್ತರಕ್ಕೇರಿಸಬಲ್ಲ ಸಾಧನಗಳು.

ವಿದ್ಯಸಾ ವಿಮುಕ್ತಯೇ ಎಂಬ ತತ್ವೋಕ್ತಿಯಂತೆ ವಿದ್ಯೆಯನ್ನು ಪಡೆದು ಮಾನವ ಉದ್ಧಾರವನ್ನು ಪಡೆದು, ಮಾನವ ಉದ್ಧಾರವನ್ನು ಮಾಡಲು ಸಾಮಾಜಿಕ ಪಿಡುಗುಗಳಿಂದ ವಿಮುಕ್ತಿ ಪಡೆಯಲು ಸಹಾಯ ಮಾಡುವದೇ ಶಿಕ್ಷಣ

ಅಂದರೆ ಮನುಷ್ಯನ ಬದುಕನ್ನು ಬೆಳಕಿನಡೆಗೆ ಒಯ್ಯುವುದೆ ಶಿಕ್ಷಣ. ಇಂತಹ ಜ್ಞಾನ ದಾಸೋಹ, ಅನ್ನ ದಾಸೋಹ ಮಾಡುವ ಯತಿವರ್ಯರು ಇನ್ನು ಭಕ್ತನ ಜೀವಿಸುತ್ತಾ ಜೀವಿಸಲಿ ನಮ್ಮಂತ ಸಾಮಾನ್ಯರ ಬದುಕಿಗೆ ಬೆಳಕಾಗಲಿ.

Leave a Reply

Your email address will not be published.

Social Media Auto Publish Powered By : XYZScripts.com