ಈ ವರ್ಷವೇ ಮದ್ವೆ ಆಗ್ತಾರಂತೆ ಮಲೈಕಾ-ಅರ್ಜುನ್ – ಬಾಲಿವುಡ್‍ನಲ್ಲಿ ಹರಿದಾಡುತ್ತಿದೆ ಹೊಸ ಸುದ್ದಿ

ಬಾಲಿವುಡ್‍ನಲ್ಲಿ ಸದ್ಯ ರಿಲೇಷನ್‍ಷಿಪ್‍ನಲ್ಲಿದ್ದು ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಈ ವರ್ಷವೇ ಮದುವೆ ಆಗಲಿದ್ದಾರಂತೆ. ಬಾಲಿವುಡ್‍ನಲ್ಲಿ ಇವರಿಬ್ಬರ ಮದುವೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

ಇನ್ನು ಮದುವೆ ನಂತರದ ವಾಸ್ತವ್ಯಕ್ಕಾಗಿ ಅರ್ಜುನ್ ಮತ್ತು ಮಲೈಕಾ ಮುಂಬೈನಲ್ಲಿ ಮನೆ ಹುಡುಕುತ್ತಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಮತ್ತೊಂದೆಡೆ ಕಪೂರ್ ಕುಟುಂಬಕ್ಕೆ ಮಲೈಕಾ ಆಗಮಿಸಲಿರುವುದಕ್ಕೆ ಅನಿಲ್‍ಕಪೂರ್, ಸಂಜಯ್ ಕಪೂರ್, ಜಾನ್ಹವಿ ಕಪೂರ್ ಸ್ವಾಗತ ಸೂಚಿಸಿದ್ದರೆ, ಬೋನಿ ಕಪೂರ್, ಸೋನಂ ಕಪೂರ್ ಮತ್ತು ಅನ್ಷುಲಾ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಇವರಿಬ್ಬರೂ ಇತ್ತೀಚೆಗೆ ತೀವ್ರ ಟ್ರೋಲಿಗೀಡಾಗಿದ್ದಾರೆ. ಮೊನ್ನೆಮೊನ್ನೆಯಷ್ಟೇ ಹೋಟೆಲೊಂದರಿಂದ ಹೊರಬರುತ್ತಿದ್ದ ಇವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ ಫೋಟೋ ನೋಡಿದ ಕೆಲವರು ಅರ್ಜುನ್ ದಪ್ಪ ಆಗಿದ್ದಾರೆ ಎಂದಿದ್ದರೆ ಇನ್ನು ಕೆಲವರು ಮಲೈಕಾಗೆ ಏಜ್ ಆಗಿದ್ದು 12 ವರ್ಷ ಕಿರಿಯನನ್ನು ಮದುವೆ ಆಗುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com