ಈ ವಾರ ರಾಕೇಶ್ ಬಿಗ್ ಬಾಸ್ ಮನೆಯಿಂದ ಔಟ್ : ಹೊರಡುವ ಮುನ್ನ ಸ್ನೇಹದಿಂದ ಚಂದದ ಆಟ

ಬಿಗ್ ಬಾಸ್ ಮನೆಯಿಂದ ಈ ವಾರ ರಾಕೇಶ್ ಔಟ್ ಆಗಿದ್ದಾರೆ. ಪ್ರತೀ ಬಾರಿ ನಾಮಿನೇಟ್ ಆಗುತ್ತಿದ್ದ ಆಂಡಿ ಈ ಬಾರಿ ರಾಕೇಶ್ ಮನೆಯಿಂದ ಹೋದ ಕಾರಣ ಉಳಿದುಕೊಂಡರು. ಆದರೆ ರಾಕೇಶ್ ಮಾತ್ರ ತುಂಬಾನೇ ನೊಂದು ಕಣ್ಣೀರಾಕಿದ್ರು. ಈ ನೋವಿನಲ್ಲೂ ಮನೆಯ ಇನ್ನುಳಿದ ಸದಸ್ಯರೊಂದಿಗೆ ಸ್ನೇಹದಿಂದ ಆಟವೊಂದನ್ನ ಆಡಿದ್ದು ಮನೆಯ ಸ್ಪರ್ಧಿಗಳಿಗೆ ಕಣ್ತುಂಬಿ ಬಂತು. ರಾಕೇಶ್ ತುಂಬಾ ಒಳ್ಳೆ ಆಟಗಾರ. ಸಮಯ ಸಂದರ್ಭವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡು ಆಡಬಲ್ಲ ವ್ಯಕ್ತಿ. ಆದರೆ ಎಲ್ಲೋ ಒಂದು ಕಡೆ ಅವರು ಮನೆಯ ಸದಸ್ಯರ ಮನೆಗೆಲ್ಲುವಲ್ಲಿ ಎಡವಿದರೂ. ಮನೆಯ ಸದಸ್ಯರು ಮಾತ್ರವಲ್ಲ ಬಿಗ್ ಬಾಸ್ ವೀಕ್ಷಕರಲೂ ಕೊಂಚ ಬೇಸರ ತಂದಿದ್ದು ನಿಜ.

ರಾಕೇಶ್ ಮನೆಯಿಂದ ಔಟ್ ಆಗಲು ಕಾರಣ ಎಲ್ಲರಿಗೂ ಗೊತ್ತಿರುವ ವಿಚಾರವೇ.

ಬಿಗ್ ಬಾಸ್ ಮನೆಯಲ್ಲಿ ಉಳಿಯಬೇಕು ಎಂದರೆ ಮನೆಯ ಸದಸ್ಯರ ಮನ ಗೆಲ್ಲದೇ ಹೋದರೂ ವೀಕ್ಷಕರ ಮನ ಗೆಲ್ಲಬೇಕು. ಈ ವಿಚಾರದಲ್ಲಿ ಎಡವಿದರೂ ರಾಕೇಶ್. ಅಕ್ಷತಾ ಅವರ ಜೊತೆಗೂಡಿ ಮನೆಯಲ್ಲಿರುವ ಹೆಚ್ಚು ಸಮಯವನ್ನು ಕಳೆದರು. ಮನೆಗೆ ಕೆಲ ಹುಡುಗೀಯರ ಆಗಮನದಿಂದಲೂ ಬದಲಾದರೂ ರಾಕೇಶ್. ಹೀಗಾಗಿ ರಾಕೇಶ್ ಹೇಗೆ ಎನ್ನುವುದು ಕೂಡ ವೀಕ್ಷಕರಿಗೆ ಅರ್ಥವಾಗಲಿಲ್ಲ. ಇಲ್ಲಿಯವರೆಗೆ ಜನ ಅವರನ್ನು ಉಳಿಸಿಕೊಂಡು ಬಂದಿರುವುದು ಸಣ್ಣ ವಿಚಾರವಲ್ಲ. ಮುಕ್ಕಾಲು ದಿನಗಳನ್ನ ಕಳೆದು ಮನೆಯಿಂದ ರಾಕೇಶ್ ಹೊರನಡೆಯುವುದು ಅಂದರೆ ತುಂಬಾ ನೋವಿನ ಸಂಗತಿ. ಆದರೆ ಕೆಲವು ವಿಚಾರಗಳಿಂದ ರಾಕೇಶ್ ದೂರವಿದಿದ್ದರೆ ಬಿಗ್ ಬಾಸ್ ಫೈನಲ್ ಗೆ ತಲುಪಬಹುದಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com