ಪ್ರಿಯಾ ವಾರಿಯರ್ ಅಭಿನಯದ ‘ಶ್ರೀದೇವಿ ಬಂಗ್ಲೋ’ : 4 ಭಾಷೆಗಳಲ್ಲಿ ರೀಲಿಸ್ ಗೆ ಚಿಂತನೆ..

ಪ್ರಿಯಾ ವಾರಿಯರ್ ಅಭಿನಯದ ‘ಶ್ರೀದೇವಿ ಬಂಗ್ಲೋ’ ಸಿನಿಮಾ ಸದ್ಯ  ಕನ್ನಡ, ತೆಲುಗು, ತಮಿಳ್, ಮಳಿಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಚಿಂತನೆ ಮಾಡಲಾಗುತ್ತಿದೆ.  ಹೀಗಾಗಿ ಕಣ್ಸನ್ನೆ ಹುಡುಗಿಯ ಅತಿಲೋಕ ಸುಂದರಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಹುಬ್ಬೇರಿಸುವ ಹುಡುಗಿ ಕೋಟಿ ಕೋಟಿ ಹೃದಯ ಗೆದ್ದ ಕುಟ್ಟಿ ‘ಶ್ರೀದೇವಿ ಬಂಗ್ಲೋ’ ಸಿನಿಮಾದ ಮೂಲಕ ನಾಲ್ಕು ಭಾಷೆಗಳಲ್ಲಿ ಅಭಿಮಾನಿಗಳ ಮನ ಗೆಲ್ಲುತ್ತಾರಾ ಅನ್ನೋ ಕುತೂಹಲ ಕೆರಳಿಸಿದೆ.

ಒಂದು ಹುಬ್ಬೇರಿಸುವ ಮೂಲಕ ಏಕಾಏಕಿ ಹೆಸರುವಾಸಿಯಾದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್‍ ಗೆ ಪ್ರವೇಶಿಸಿ, “ಶ್ರೀದೇವಿ ಬಂಗ್ಲೋ” ಸಿನಿಮಾಗೆ ನಾಯಕಿಯಾಗಿದ್ದು, ಅದೀಗ ಚಿತ್ರದ ಶೀರ್ಷಿಕೆ ಕಾರಣಕ್ಕೆ ವಿವಾದವೂ ಆಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾ, “ಶ್ರೀದೇವಿ, ನನ್ನ ಸಿನಿಮಾದ ಪಾತ್ರದ ಹೆಸರಷ್ಟೇ, ವಿವಾದ ಯಾರಿಗೆ ಬೇಕು?” ಎಂದಿದ್ದಾರೆ. ಹೀಗಾಗಿ ಪ್ರಿಯಾ ವಾರಿಯರ್ ಗುಣಗಾನ ಮಾಡಿದ ಶ್ರೀದೇವಿ ಅಭಿಮಾನಿಗಳೇ ಕಣ್ಸನ್ನೆ ಸುಂದರಿ ವಿರುದ್ಧ ತಿರುಗಿಬಿದ್ದಿದ್ದಾರೆ.

‘ಶ್ರೀದೇವಿ ಬಂಗ್ಲೋ’ ವಿರುದ್ಧ ಸಮರ ಸಾರಿದ ದೋನಿ

ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಅದರಲ್ಲಿ ನಟಿ ಪಾತ್ರ ಮಾಡಿರುವ ಪ್ರಿಯಾ ಬಾತ್‍ ಟಬ್‍ ನಲ್ಲಿರುವ ದೃಶ್ಯವಿದೆ. ಇದು ನಟಿ ಶ್ರೀದೇವಿ ಸಾವಿಗೆ ಹೋಲುತ್ತಿರುವುದರಿಂದ ಅವರ ಪತಿ ಬೋನಿ ಕಪೂರ್ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಲೀಗಲ್ ನೋಟಿಸ್ ಕೂಡ ಕಳಿಸಿದ್ದರು.

ಶ್ರೀದೇವಿ ಅಭಿಮಾನಿಗಳೇ ಚಿತ್ರ ಶ್ರೀದೇವಿಯರ ಜೀವನ ಚರಿತ್ರೆ ಹೊಂದಿದೆ ಎಂದು ನಿರ್ಧಾರ ಮಾಡಲಿ

ಇದಕ್ಕೆ ಚಿತ್ರದ ನಿರ್ದೇಶಕ ಪ್ರಶಾಂತ್ ಮಾಂಬುಲಿ, “ಶ್ರೀದೇವಿ ಪಾತ್ರದ ಹೆಸರು, ಅದನ್ನು ಬದಲಾಯಿಸುವುದಿಲ್ಲ, ನೋಟಿಸನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ” ಎಂದಿದ್ದರು. ಈಗ ನಾಯಕಿ ಪ್ರಿಯಾ ಅದನ್ನೇ ಪುನರುಚ್ಚರಿಸಿದ್ದು, “ಚಿತ್ರದ ಕಥೆ ಶ್ರೀದೇವಿಯವರದ್ದಲ್ಲ. ಅಷ್ಟಕ್ಕೂ ಅದನ್ನು ಪ್ರೇಕ್ಷಕರೇ ನಿರ್ಧರಿಸಲಿ” ಎಂದಿದ್ದಾರೆ.

 

Leave a Reply

Your email address will not be published.