ಜೀ ಕನ್ನಡ ನಾಯಕತ್ವ ಸ್ಥಾನದಲ್ಲಿ – 13 ವರ್ಷಗಳಲ್ಲಿ ಮೊಟ್ಟಮೊದಲ ಸಾಲಿನ ಚಾನೆಲ್

ಜೀ ಕನ್ನಡ ನಾಯಕತ್ವ ಸ್ಥಾನದಲ್ಲಿ-13 ವರ್ಷಗಳಲ್ಲಿ ಮೊಟ್ಟಮೊದಲ ಸಾಲಿನ ಚಾನೆಲ್

ಚಾನೆಲ್ ಕನ್ನಡ ಜಿಇಸಿ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಸರಾಸರಿ 415697 ಇಂಪ್ರೆಷನ್ಸ್ ‘000s

¨ ಬೆಂಗಳೂರು, ಜನೆವರಿ 17, 2019: ಇತ್ತೀಚೆಗೆ ಬಿಡುಗಡೆ ಮಾಡಲಾದ 2019ರ ಮೊದಲ ವಾರದ ಬಾರ್ಕ್ ವೀಕ್ಲಿ ಡೇಟಾ ಪ್ರಕಾರ(ನಗರ+ಗ್ರಾಮೀಣ) ಜೀ ಕನ್ನಡ, ಕನ್ನಡ ಮಾರುಕಟ್ಟೆಯಲ್ಲಿ ಒಟ್ಟು 415697 ಇಂಪ್ರೆಷನ್ಸ್ ‘000s ಮೂಲಕ ಕನ್ನಡ
ಮಾರುಕಟ್ಟೆಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿದೆ; ನಗರ ಮಾರುಕಟ್ಟೆಯಲ್ಲಿ 171167 ಇಂಪ್ರೆಷನ್ಸ್ ‘000s ಇದ್ದು, ಗ್ರಾಮೀಣ
ಮಾರುಕಟ್ಟೆಯಲ್ಲಿ 244530 ಹೊಂದಿದ್ದು ಪ್ರೈಮ್ ಫಿಕ್ಷನ್ ಶೋಗಳ ಸದೃಢ ಬೆಳವಣಿಗೆ ಹೊಂದಿದೆ. ನಗರ
ಮಾರುಕಟ್ಟೆಯಲ್ಲಿ ಕಳೆದ 12 ವರ್ಷಗಳಿಂದ ನಾಯಕತ್ವ ಸ್ಥಾನವನ್ನು ಮುಂದುವರೆಸಿರುವ ಜೀ ಕನ್ನಡ ಕಳೆದ 13
ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕತ್ವ ಸ್ಥಾನದ ಗೌರವಕ್ಕೆ ಪಾತ್ರವಾಗಿದೆ.

ಮಾರುಕಟ್ಟೆಯ ನಾಯಕ ಸ್ಥಾನವನ್ನು ತಲುಪುವ ಸವಾಲನ್ನು ಸ್ವೀಕರಿಸಿದ ಜೀ ಕನ್ನಡ ಪ್ರೈಮ್-ಟೈಮ್ ಬ್ಯಾಂಡ್‍ನಲ್ಲಿ
260314 ಇಂಪ್ರೆಷನ್ಸ್ ‘000s ಹೊಂದಿದ್ದು ಯಾರೇ ನೀ ಮೋಹಿನಿ, ಪಾರು ಮತ್ತು ಬ್ರಹ್ಮಗಂಟು ಮುಂಚೂಣಿಯ
ಧಾರಾವಾಹಿಗಳಿಂದ ಈ ಸ್ಥಾನ ತಲುಪಿದೆ. ಈ ಚಾನೆಲ್ ವಾರಾಂತ್ಯಗಳಲ್ಲಿ ನಾನ್-ಫಿಕ್ಷನ್ ಶೋಗಳಾದ ಸ ರೆ ಗ ಮ ಪ
ಸೀಸನ್ 15 ಮತ್ತು ಡ್ರಾಮಾ ಜೂನಿಯರ್ಸ್ ಸೀಸನ್ 3ರ ಮೂಲಕ ಪ್ರೈಮ್ ಸ್ಲಾಟ್‍ಗಳಲ್ಲಿ ನಾಯಕತ್ವ ಸ್ಥಾನ ಪಡೆದಿದೆ.

ಈ ರೇಟಿಂಗ್ಸ್ ಕುರಿತು ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಕನ್ನಡ ಜಿಇಸಿ ವಲಯದಲ್ಲಿ ಶ್ರೇಷ್ಠ
ಸ್ಥಾನವನ್ನು ಪಡೆಯುವ ನಮ್ಮ ಗುರಿ ಸಾಧಿಸುವ ಮೂಲಕ ಹೊಸವರ್ಷಕ್ಕೆ ಚಾಲನೆ ನೀಡಿರುವುದಕ್ಕೆ ಜೀó ಕುಟುಂಬಕ್ಕೆ ನಾನು
ಅಭಿನಂದನೆ ಸಲ್ಲಿಸುತ್ತೇನೆ. ಚಾನೆಲ್‍ನ ಇತ್ತೀಚಿನ ನವೀಕೃತ ಬ್ರಾಂಡ್ ಇಮೇಜ್‍ನೊಂದಿಗೆ ಜೀó ಕನ್ನಡ ಆಸಕ್ತಿದಾಯಕ
ಪರಿಕಲ್ಪನೆಗಳು, ಕಥಾವಸ್ತುಗಳ ಮೂಲಕ ಅಪಾರ ಪ್ರಗತಿ ಸಾಧಿಸಿದೆ ಮತ್ತು ನಮ್ಮ ಯಶಸ್ಸು ನಮ್ಮ ವೀಕ್ಷಕರೊಂದಿಗೆ
ಸತತವಾಗಿ ಸದೃಢಗೊಳ್ಳುತ್ತಿರುವ ಬಾಂಧವ್ಯಕ್ಕೆ ಪುರಾವೆಯಾಗಿದೆ. ಮೊಟ್ಟಮೊದಲ ಬಾರಿಗೆ ಕಳೆದ 13 ವರ್ಷಗಳಲ್ಲಿ
ನಂಬರ್ ಒನ್ ಕನ್ನಡ ಜನರಲ್ ಎಂಟರ್‍ಟೈನ್‍ಮೆಂಟ್ ಚಾನೆಲ್ ಆಗಿರುವುದಕ್ಕೆ ಥ್ರಿಲ್ ಆಗಿದ್ದೇವೆ ಮತ್ತು ನಮ್ಮ
ಪಾಲುದಾರರು ಹಾಗೂ ನಮ್ಮ ಅಕ್ಕರೆಯ ವೀಕ್ಷಕರ ಬೆಂಬಲದಿಂದ ವಿನೀತರಾಗಿದ್ದೇವೆ” ಎಂದರು.

Leave a Reply

Your email address will not be published.

Social Media Auto Publish Powered By : XYZScripts.com