Badminton : ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೈನಾ, ಪಿ.ಕಶ್ಯಪ್ ಹಾಗೂ ಕೆ.ಶ್ರೀಕಾಂತ್ ಶುಭಾರಂಭ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್, ಪಿ.ಕಶ್ಯಪ್ ಹಾಗೂ ಕೆ.ಶ್ರೀಕಾಂತ್ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಏಳನೇ ಶ್ರೇಯಾಂಕಿತೆ ಸೈನಾ 14-21, 21-18, 21-18 ರಿಂದ ಹಾಂಕಾಂಗ್ ನ ಜಾಯ್ ಜುನ್ ಡೆಂಗ್ ವಿರುದ್ಧ 1 ಗಂಟೆ 5 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆ.ಶ್ರೀಕಾಂತ್ 21-17, 21-11 ರಿಂದ ಹಾಂಕಾಂಗ್ ನ ಆಂಗಸ್ ಕಾ ಲಾಂಗ್ ಅವರನ್ನು ಮಣಿಸಿ, ಮುನ್ನಡೆ ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಕಶ್ಯಪ್ ಅವರು 19-21, 21-19, 21-10 ರಿಂದ ಡೆನ್ಮಾರ್ಕ್ ನ ರಾಸ್ಮಸ್ ಜೆಮೆಕೆ ವಿರುದ್ಧ ಗೆಲುವು ಸಾಧಿಸಿ, ಎರಡನೇ ಸುತ್ತಿಗೆ ಅರ್ಹತೆ ಪಡೆದುಕೊಂಡರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ, ಎನ್.ಸಿಕ್ಕಿ ರೆಡ್ಡಿ, ಮಿಶ್ರ ಡಬಲ್ಸ್ ನಲ್ಲಿ ಪ್ರಣವ್ ಛೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಜಯದ ನಗೆ ಬೀರಿದರು.

Leave a Reply

Your email address will not be published.

Social Media Auto Publish Powered By : XYZScripts.com