ಸಿದ್ಧಗಂಗಾ ಮಠಕ್ಕೆ ಪೊಲೀಸ್ ಭದ್ರತೆ ಹೆಚ್ಚಳ : ಮಠದ ಬಳಿ ಸೇರುತ್ತಿರುವ ಭಕ್ತಾಧಿಗಳು

ವಯೋಸಹಜ ಅನಾರೋಗ್ಯದಿಂದ ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗಿನ ಜಾವ 5.30ಕ್ಕೆ ಅವರನ್ನು ಏಕಾಏಕಿ ಮಠಕ್ಕೆ ಕರೆದುಕೊಂಡು ಬಂದಿರುವುದು ಸಾಕಷ್ಟು ಆತಂಕಕ್ಕೆ ಗುರಿ ಮಾಡಿದಂತಾಗಿದೆ. ಅದೂ ಅಲ್ಲದೇ ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೂ ಕೂಡ ಶ್ರೀಗಳ ದರ್ಶನ ಪಡೆದು ಮಾಧ್ಯಮದ ಮುಂದೆ ಮಾತನಾಡಿ ‘ ಶ್ರೀಗಳು ಇಚ್ಚಾಮರಣಿ’ ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಹಾಗೆ ಮಠದಲ್ಲಿ ಕೊಡಲಾಗುತ್ತಿದೆ. ವಯೋಸಹಜ ಅನಾರೋಗ್ಯವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಅವರು ಹೊಂದಿಕೊಳ್ಳುತ್ತಿಲ್ಲ. ಜೊತೆಗೆ ಅವರಿಗೆ ಹೆಚ್ಚಿನ ಚಿಕಿತ್ಸೆ ಮೂಲಕ ಹಿಂಸೆ ನೀಡುವುದು ಬೇಡ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಬಿಎಸ್ ವೈ ತಿಳಿಸಿದ್ದಾರೆ.

ಜೊತೆಗೆ ಮಠದ ಕಿರಿಯ ಸ್ವಾಮಿಗಳು ತುಂಬಾ ನೊಂದಿದ್ದಾರೆ. ಅವರನ್ನು ಭೇಟಿಯಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಹೀಗಾಗಿ ತಕ್ಷಣದ ಬದಲಾವಣೆಗಳನ್ನ ಕಂಡು ಮಠದ ಬಳಿ ಜನರು ಸೇರಿಕೊಳ್ಳುತ್ತಿದ್ದಾರೆ. ಜೊತೆಗೆ ಮಠದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com