ನವೀನ್ ಹಾಡಿಗೆ ಹೆಜ್ಜೆ ಹಾಕಿದ ಹಳೆಯ ಸ್ಪರ್ಧಿಗಳು : ಕವಿತಾಳನ್ನ ಮನಸ್ಸಿಂದ ತಂಗಿ ಎಂದ ಆ್ಯಂಡಿ

ಬಿಗ್ ಬಾಸ್ ಸೀಸನ್ 6 ಫೈನಲ್ ಗೆ ಇನ್ನೇನು ಕೆಲವೇ ವಾರಗಳು ಬಾಕಿ ಇವೆ.  ಮನೆಗೆ ಆಗಮಿಸಿದ 5 ಜನ ಹಳೆಯ ಸ್ಪರ್ಧಿಗಳು ತಮಗೆ ಇಷ್ಟಕ್ಕನುಸಾರ ಈಗಿರುವ ಸರ್ಧಿಗಳನ್ನು ಆಡಿಸುತ್ತಿದ್ದಾರೆ. ಅದರಲ್ಲೂ ಒಳ್ಳೆ ಹುಡುಗ ಪ್ರಥಮ ಮಾತ್ರ ಸ್ಪರ್ಧಿಗಳಿಗೆ ಸರಿಯಾಗೇ ಬೆನ್ನು ಬಿದ್ದಿದ್ದಾರೆ.

ಹೌದು.. ನಿನ್ನೆ ಬಿಗ್ ಬಾಸ್ ಗೆ ಆಗಮಿಸಿದ ಪ್ರಥಮ್, ಕಿರಿಕ್ ಕೀರ್ತಿ, ಸಂಜನಾ, ಕೃಷಿ ಮತ್ತು ಆಚಾರ್ಯ ಅವರು ಮನೆಯ ಸ್ಪರ್ಧಿಗಳ ಕೈಯಲ್ಲಿ ಬೇಕೆನಿಸುವ ತಿನಿಸು ಮಾಡಿಸಿಕೊಂಡು ತಿನ್ನುತ್ತಿದ್ದಾರೆ. ಜೊತೆಗೆ ಸ್ಪರ್ಧಿಗಳೂ ಕೂಡ ಹಳೆಯ ಸ್ಪರ್ಧಿಗಳನ್ನು ಮೆಚ್ಚಿಸಲು ನಾನಾ ಕಸರತ್ತು ಮಾಡುತ್ತಿದ್ದಾರೆ.

ಇನ್ನೂ ಬಿಗ್ ಬಾಸ್ ನಿನ್ನೆ ಟಾಸ್ಕ್ ವೊಂದನ್ನ ನೀಡಿದ್ದರು. ಮನೆಗೆ ಆಗಮಿಸಿದ ಹಳೆಯ ಸ್ಪರ್ಧಿಗಳು ಏನೇ ಹೇಳಲಿ ‘ನೋ’ ಎನ್ನದೆ ಈಗಿರುವ ಸ್ಪರ್ಧಿಗಳು ಮಾಡಬೇಕು. ಈ ಸಮಯವನ್ನು ಬಳಸಿಕೊಂಡ ಪ್ರಥಮ್ ಮತ್ತು ಕೃಷಿ ಏನ್ ಮಾಡಿರಬಹುದು ಹೇಳಿ..?

ಒಳ್ಳೆ ಹುಡುಗ ಪ್ರಥಮ್ ಆ್ಯಂಡಿಗೆ ನೀವು ಕವಿತಾ ಬಳಿ 10 ನಿಮಿಷ ಅಲ್ಲಾ ಎಷ್ಟು ಬೇಕಾದರೂ ಮಾತನಾಡಬಹುದು. ಆದರೆ ಮಾತನಾಡುವಾಗ ಕವಿತಾಳನ್ನು ತಂಗೀ ಎಂದೇ ಕರೆಯಬೇಕು ಎನ್ನುವ ಆದೇಶ ನೀಡಿದ್ದರು. ಇದಕ್ಕೆ ಆ್ಯಂಡಿ ವಿಧಿಯಿಲ್ಲದೆ ಒಪ್ಪಿಕೊಳ್ಳಬೇಕಾಯ್ತು. ಜೊತೆಗೆ ಕವಿತಾಳನ್ನ ತಂಗೀ ಎಂದೇ ಕರೆದರು.

ಇತ್ತ ಕೃಷಿ ನವೀನ್ ಅವರಿಗೆ ನಿಮ್ಮಲ್ಲಿ ಒಂದೊಳ್ಳೆ ಕಲೆ ಇದೆ. ಆ ಕಲೆಯನ್ನ ನೀವು ಬಚ್ಚಿಡುತ್ತಿದ್ದೀರಾ ಎಂದು. ತಾವು ಯಾವ ಮಾತನಾಡಿದರೂ ಹಾಡಿನ ಮೂಲಕವೇ ಮಾತನಾಡಬೇಕು ಎನ್ನುವ ಆದೇಶ ಕೊಟ್ಟರು. ಇದಕ್ಕೊಪ್ಪಿದ ನವೀನ್ ಹಾಡುಗಳನ್ನ ಕೇಳಿದ ಹಳೆಯ ಸ್ಪರ್ಧಿಗಳು ನೃತ್ಯ ಮಾಡಿ ಎಂಜಾಯ್ ಮಾಡಿದರು.

 

Leave a Reply

Your email address will not be published.

Social Media Auto Publish Powered By : XYZScripts.com