ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್..! : ಸಮ್ಮಿಶ್ರ ಸರ್ಕಾರದಲ್ಲಿ ಟೆನ್ಶನ್.. ಟೆನ್ಶನ್..

ಮಾಜಿ ಸಚಿವ ಆರ್, ಶಂಕರ್ , ಪಕ್ಷೇತರ ಶಾಸಕ ಹೆಚ್. ನಾಗೇಶ್ ಇವರಿಬ್ಬರು ಸಮ್ಮಿಶ್ರ ಸರ್ಕಾರದ ಬೆಂಬಲಕ್ಕೆ ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನೂ ತಿಳಿಸಿದ ಪಕ್ಷೇತರ ಶಾಸಕರು ತಮಗೆ ಸಮ್ಮಿಶ್ರ ಸರ್ಕಾರದಿಂದ ಸರಿಯಾದ ಗೌರವ ಸಿಗುತ್ತಿಲ್ಲ ಎಂದಿದ್ದಾರೆ. ಇನ್ನೂ ಹಲವಾರು ಕಾರಣವನ್ನು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಅಭದ್ರ ಇರುವ ಸರ್ಕಾರ ಶಾಸಕರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ

ಉತ್ತಮ ಆಡಳಿತ ನೀಡುವಲ್ಲಿ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ

ಶಾಸಕರಾಗಿ ನಾವು ಸಣ್ಣ ಪುಟ್ಟ ಕೆಲಸಗಳಿಗೆ ಅಲೆದಾಡುವಂತಾಗಿದೆ

ನಮಗೆ ಸರ್ಕಾರದಿಂದ ಸೂಕ್ತವಾದ ಸೂಚನೆ ಸಿಕ್ಕಿರಲಿಲ್ಲ

ಉತ್ತಮ ಆಡಳಿತ ನೀಡಲಿ ಎಂದು ಸರ್ಕಾರವನ್ನು ಬೆಂಬಲಿಸಿದ್ದೆವು

ಸರ್ಕಾರದ ಕಾರ್ಯ ವೈಖರಿಯಿಂದ ಬೇಸತ್ತು ಈ ಬೆಂಬಲ ವಾಪಸ್ ಪಡೆಯಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ವಾಪಸ್ಸಾಗುವ ಪ್ರಸ್ತಾಪಕೂಡ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com