ಬಿಗ್ ಬಾಸ್ ಮನೆಗೆ ಹಳೆಯ ಸ್ಪರ್ಧಿಗಳು ಎಂಟ್ರಿ : ಹೊರಬಂತು ಅಂತಿಮ ಸ್ಪರ್ಧಿಯ ಹೆಸರು..

ಬಿಗ್ ಬಾಸ್ ಸೀಸನ್ 4 ಸ್ಪರ್ಧಿ ವಿನ್ನರ್, ಒಳ್ಳೆ ಹುಡುಗ ಪ್ರಥಮ್, ರನ್ನರಪ್ ಕಿರಿಕ್ ಕೀರ್ತಿ ಹಾಗೂ ಸಂಜನಾ ಚಿದಾನಂದ್ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್  5ರ ಸ್ಪರ್ಧಿಗಳಾದ ಸಮೀರ್ ಆಚಾರ್ಯ ಹಾಗೂ ನಟಿ ಕೃಷಿ ತಾಪಂಡ ದೊಡ್ಡ ಮನೆಯ ಹೊಸ ಕೋಣೆಗೆ ಪ್ರವೇಶ ಪಡೆದಿದ್ದಾರೆ. ಈ ಐದು ಸ್ಪರ್ಧಿಗಳಿಗೆ ವಿಶೇಷ ಕೋಣೆಯನ್ನು ನಿರ್ಮಿಸಲಾಗಿದ್ದು, ಮನೆಗೆ ಬಂದ ಹಳೆಯ ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಪ್ರಥಮ್ ತನ್ನ ಗೆಳೆಯ ಕಿರಿಕ್ ಕೀರ್ತಿಯನ್ನು ನೋಡುತ್ತಲೇ ತಬ್ಬಿಕೊಂಡು ಎಂದಿನಂತೆ ಕಿರುಚಾಡಿದ್ದಾರೆ. ಮತ್ತೆ ಕೆಲವರು ಬಿಗ್ ಬಾಸ್ ಮನೆಗೆ ಬಂದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ  ಫೈನಲ್ ಕಾಂಪಿಟೇಟರ್ ಯಾರೆಂದು ಮನೆಗೆ ಆಗಮಿಸಿದ ಐದು ಜನರು ಒಮ್ಮತದಿಂದ ಆಯ್ಕೆ ಮಾಡಿದ್ದು ಧನರಾಜ್ ಅವರನ್ನ. ಧನರಾಜ್ ಒಳ್ಳೆಯ ಟಾಲೆಂಟ್ ಹೊಂದಿದ್ದು ಅವರು ಯಾರಿಗೂ ಕೂಡ ಹೆಚ್ಚಾಗಿ ಬೇಸರ ತಂದಿಲ್ಲ. ಹೀಗಾಗಿ ಅವರು ಫೈನಲ್ ಗೆ ಹೋಗುವ ಅರ್ಹತೆಯನ್ನು ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಹಳೆಯ ಸ್ಪರ್ಧಿಗಳು.

ಇನ್ನೂ ಧನರಾಜ್ ಅವರ ಹೆಸರು ಹೇಳುತ್ತಿದ್ದಂತೆ ಮನೆಯ ಬಹುತೇಕ ಜನರ ಮುಖ ಸಣ್ಣಕಾಗಿ ಹೋಯ್ತು. ಅಂದರೆ ಬಿಗ್ ಬಾಸ್ ಫೈನಲ್ ವಿನ್ನರ್ ಧನರಾಜ್ ಅವರೇ ಎನ್ನುವಂತೆ ಇನ್ನುಳಿದ ಸ್ಪರ್ಧಿಗಳ ಮುಖಭಾವದಲ್ಲಿ ಎದ್ದುಕಾಣುತ್ತಿತ್ತು. ಆದರೆ ಧನರಾಜ್ ಫೈನಲ್ ಸ್ಪರ್ಧಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನುವುದನ್ನ ಅರಿತು ಸ್ಪರ್ಧಿಗಳು ಹೇಗೆ ಆಡ್ತಾರೆ ಅನ್ನೋದು ಕೂಡ ಕುತೂಹಲಕಾರಿಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com