ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಮೈತ್ರಿ ಸರ್ಕಾರದ ಪ್ರತಿತಂತ್ರ : ಅತೃಪ್ತರನ್ನು ವಾಪಸ್ ಕರೆತರುವ ಪ್ಲಾನ್

ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಪ್ರತಿತಂತ್ರ ರೂಪಿಸುತ್ತಿರುವ ಮೈತ್ರಿ ಸರ್ಕಾರ ಅತೃಪ್ತರನ್ನು ಪಾವಸ್ ಕರೆತರಲು ಪ್ಲಾನ್ ಮಾಡುತ್ತಿದೆ. ಈ ಕುರಿತಾಗಿ ಕೆಕೆ ಗೆಸ್ಟ್ ಗೌಸ್ ನಲ್ಲಿ ಸಭೆ ನಡೆಸಲಾಗುತ್ತಿದೆ. ತಡರಾತ್ರಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ  ಕೆ.ಸಿ ವೇಣುಗೋಪಾಲ ಸಭೆ ನಡೆಸಲಿದ್ದಾರೆ.  ಸಿದ್ದರಾಮಯ್ಯ ಆಗಮನಕ್ಕೆ ಕಾಯುತ್ತಿದ್ದಾರೆ ವೇಣುಗೋಪಾಲ್ ಅವರು ಆಗಮನದ ಬಳಿಕ ಸಭೆ ನಡೆಸಲಿದ್ದಾರೆ. ಜೊತೆಗೆ ಅತೃಪ್ತರನ್ನು ಪಾವಸ್ ಕರೆತರುವ ಸಚಿವ ಡಿಕೆ ಶಿವಕುಮಾರ್ ಇಂದು ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಸಭೆಯಲ್ಲಿ ಡಿಕೆ ಶಿವಕುಮಾರ್, ದಿನೇಶ್ ಗುಂಡುರಾವ್, ಸಚಿವ ಪ್ರಯಾಂಕ್ ಖರ್ಗೆ ಕಾಂಗ್ರೆಸ್ ಪ್ರಮುಖ ನಾಯಕರು ಸೇರಿದ್ದಾರೆ. ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಗೆ ಬಿಜೆಪಿ ಟಿಕೇಟ್ ಸ್ಥಾನ ನೀಡಲು ಮುಂದಾಗಿದೆ. ಇವರ ಬಗ್ಗೆ ಸಚಿವ ಪ್ರಯಾಂಕ್ ಖರ್ಗೆ ಅವರಿಗೆ ಮಾಹಿತಿ ಕೇಳಿದ್ದಾರೆ ವೇಣುಗೋಪಾಲ್ ಅವರು.

ಅತೃಪ್ತ ಶಾಸಕರಾದ ಉಮೇಶ್ ಜಾಧವ್ ಫೋನ್ ಕರೆಗೂ ಸಿಗುತ್ತಿಲ್ಲ, ಫೋನ್ ರಿಸೀವ್  ಮಾಡ್ತಾಯಿಲ್ಲ, ಚಿಂಚೋಳಿಯಲ್ಲೇ ಫೋನ್ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಮೈತ್ರಿ ಸರ್ಕಾರದಲ್ಲಿ ನಾಯಕರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಬಿಜೆಪಿ ರಣತಂತ್ರದ ವಿರುದ್ಧ ಹೊಸ ತಂತ್ರ ರೂಪಿಸುತ್ತಿದ್ದಾರೆ.  ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಭೆ ಮೇಲೆ ಸಭೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೆಕೆ ಗೆಸ್ಟ್ ಹೌಸ್ ನಿಂದ ಸಿದ್ದರಾಮಯ್ಯ ಮನೆಗೆ ಸಭೆ ಶಿಫ್ಟ್ ಆಗಲಿದೆ ಎನ್ನಲಾಗಿದೆ.

ಸಭೆಯಲ್ಲಿ ಬಿಜೆಪಿ ಆಪರೇಷನ್ ಕಮಲ ಶುರುವಾಗಿದೆ ಅದರಂತೆ ಪ್ರತಿತಂತ್ರ ನಡೆಯುತ್ತಿದೆ. ಐದಾರು ಶಾಸಕರನ್ನು ಪಾವಸ್ ಕರೆತರುವ ತಂತ್ರ ನಡೆದಿದೆ. ಸಭೆಯಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಯಾವ ರೀತಿ ಹಿಡಿದಿಟ್ಟುಕೊಳ್ಳಬೇಕು ಅನ್ನೋ ವಿಚಾರಗಳ ಬಗ್ಗೆ ಸಭೆ ಮಾಡುತ್ತಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com