14ದಿನಗಳಲ್ಲಿ ಅತ್ಯಾಚಾರಿ ವಿಚಾರಣೆ, 21 ದಿನಕ್ಕೆ ಗಲ್ಲುಶಿಕ್ಷೆ – ಆಂಧ್ರದಲ್ಲಿ ಹೊಸ ಕಾನೂನು ಜಾರಿ

ದೇಶವನ್ನೇ ಬೆಚ್ಚಿ ಬೀಳಿಸಿದ ಹೈದರಾಬಾದ್‌ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಒಂದು ವಾರದಲ್ಲಿಯೇ ಆರೋಪಿಗಳ ಎನ್‌ಕೌಂಟರ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಯ ಚರ್ಚೆಗಳು ದೇಶಾದ್ಯಂತ ನಡೆಯುತ್ತಿವೆ.

ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ವಿಧಾನಸಭೆಯು ಅತ್ಯಾಚಾರಗಳನ್ನು ತಡೆಗಟ್ಟುವಿಕೆಗಾಗಿ ರಚಿಸಿದ ಆಂಧ್ರ ಪ್ರದೇಶ ಅಪರಾಧ ಕಾನೂನು (ತಿದ್ದುಪಡಿ)ಯ, (ದಿಶಾ ಮಸೂದೆ) ಯನ್ನು ಪಾಸು ಮಾಡಿದೆ. ಅದರಂತೆ ಅತ್ಯಾಚಾರ, ಆಸಿಡ್‌ ದಾಳಿ, ಅತ್ಯಾಚಾರ ಮತ್ತು ಕೊಲೆಯ ಸಂದರ್ಭಗಳಲ್ಲಿ 14ದಿನಗಳಲ್ಲಿ ವಿಚಾರಣೆ ನಡೆಸಬೇಕು ಮತ್ತು 21 ದಿನಗಳಲ್ಲಿ ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ಪ್ರಕಟವಾಗಬೇಕು ಎಂಬ ನಿಯಮಗಳು ಸೇರಿವೆ.

ಈ ರೀತಿಯ ಪ್ರಕರಣಗಳನ್ನು ತ್ವರಿತ ವಿಚಾರಣೆ ನಡೆಸಲು ಪ್ರತ್ಯೇಕ ಕೋರ್ಟ್‌ಗಳನ್ನು ರಚಿಸಬೇಕು ಎಂಬಂತಹ ನಿಯಮಗಳುಳ್ಳ ಮಸೂದೆಗೆ ನಿನ್ನೆಯೇ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಇಂದು ಆಂಧ್ರ ವಿಧಾನಸಭೆಯು ಆ ಮಸೂದೆಗೆ ಒಪ್ಪಿಗೆ ನೀಡಿ ಅಂಗೀಕರಿಸಿದೆ.

ದಿಶಾ ಮಸೂದೆಗೆ ಚಿತ್ರನಟ ಚಿರಂಜೀವಿ ಸೇರಿದಂತೆ ಹಲವು ಜನರು ಬೆಂಬಲ ನೀಡಿದ್ದಾರೆ. ಇದರಿಂದ ಅತ್ಯಾಚಾರಗಳನ್ನು ತಡೆಗಟ್ಟಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights