Bigg Boss 6 : ಗ್ರ್ಯಾಂಡ್ ಫಿನಾಲೆಗೆ ಎರೆಡು ವಾರ ಇರುವಾಗಲೇ ದೂರವಾದ ಬೆಸ್ಟ್ ಫ್ರೆಂಡ್ಸ್

ಏನಿದು ಬಿಗ್ ಬಾಸ್ ಹೀಗೆ ಮಾಡಿಬಿಟ್ಟರು..? ಯಾರನ್ನ ದೂರ ಮಾಡಿದರೂ ಒಳ್ಳೆ ಫ್ರೆಂಡ್ಸ್ ನ ದೂರ ಮಾಡಬಾರದಿತ್ತು.. ಪಾಪ ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಳ್ಳುತ್ತಿದ್ದ ಅಕ್ಷತಾ ಹಾಗೂ ರಾಕೇಶ್ ದೂರವಾಗಿದ್ದಾರೆ. ಇದೇನ್ ದೊಡ್ಡ ವಿಚಾರ ಬಿಡ್ರಿ.. ಅವರು ಜಗಳ ಆಡೋದು ಆನಂತರ ಬಿಗಿದಪ್ಪಿಕೊಂಡು ರಾಜಿ ಆಗುವುದು ಹೊಸದೇ ಅನ್ಬೇಡಿ. ಇವರಿಬ್ಬರು ದೂರ ಆಗೋದಿಲ್ವಲ್ಲ ಅಂತ ಯೋಚನೆ ಮಾಡ್ಬೇಡಿ.  ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಕೋಪ ಮಾಡಿಕೊಂಡು ದೂರ ಆಗಿಲ್ಲ ರೀ.. ಬಿಗ್ ಬಾಸ್ಸೇ ನೀನು ತುಂಬಾ ಚೆನ್ನಾಗಿ ಆಡುತ್ತಿದ್ದೀಯಾ.. ನಿನಗೆ ಈ ಜಾಗ ಸೂಟ್ ಅಲ್ಲ ಅಂತ ಬಹುಶ: ಅಕ್ಷತಾ ಅವರನ್ನ ಹೊರಗಡೆ ಕಳುಹಿಸಿರಬೇಕು ಅಂತ ಕೆಲ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು.. ಈ ವಾರ ಬಿಗ್ ಬಾಸ್ ಮನೆಯಿಂದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪೂರ ಔಟ್ ಆಗಿದ್ದಾರೆ. ಅಷ್ಟಕ್ಕೂ ತಾವು ಮನೆಯಿಂದ ಹೊರನಡೆಯಲು ಮೊದಲು ಕಾರಣ ರಾಕೇಶ್ ಅಂತಲೇ ಹೇಳ್ತಾರೆ ಅಕ್ಷತಾ.

ಯಾಕೆಂದರೆ ಬಿಗ್ ಬಾಸ್ ಪ್ರಾರಂಭವಾದಾಗಿನಿಂದಲೂ ಜೊತೆಗೆ ಊಟ, ಜೊತೆಗೆ ಓಡಾಟ, ತಡರಾತ್ರಿವರೆಗೆ ಮಾತು, ಕಣ್ಣೀರಿಗೆ ಸಮವಾದ ಕಣ್ಣೀರು, ಸೀಕ್ರೇಟ್ ಗುಸು ಗುಸು ಪಿಸ ಪಿಸ ಮಾತುಗಳು ನಡೆದು ಸಡನ್ ಆಗಿ ಸ್ಟಾಪ್ ಆಗಿದ್ದು ಅಕ್ಷತಾ ಅವರಿಗೆ ಭಾರಿ ಹೊಡೆತ ಬಿತ್ತು. ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಹೆಚ್ಚು ಸಮಯವನ್ನು ರಾಕೇಶ್ ನೊಂದಿಗೆ ಕಳೆದ ಅಕ್ಷತಾಳಿಗೆ ರಾಕೇಶ್ ಚೇಂಜ್ ಆದಾಗಿನಿಂದಲೂ ಯಾರೊಟ್ಟಿಗೆ ಮಾತನಾಡಬೇಕು, ಬೆರೆಯಬೇಕು ಎಂದು ತಿಳಿಯಲಿಲ್ಲ. ಮುಂಕಾಗುವುದು, ಕಾರಣವಿಲ್ಲದೆ ಜಗಳವಾಡುವುದು, ತಮ್ಮ ಬಗ್ಗೆ ಮಾತನಾಡಿದರೂ ಸಹಿಸಿಕೊಳ್ಳುವುದು ಅಕ್ಷತಾ ಅವರಿಗೆ ಕಾಮನ್ ಆಯ್ತು. ಹೀಗೆ ಮನೆಯ ಇನ್ನಿತರ ಕಣ್ಣುಗಳಿಗೆ ಗುರಿಯಾಗಿದ್ದು ಅಕ್ಷತಾ.

ಮನೆಯ ಸ್ಪರ್ಧಿಗಳಿಗೆ ಮಾತ್ರವಲ್ಲ ಬಿಗ್ ಬಾಸ್ ನೋಡುವಂತ ಪ್ರೇಕ್ಷಕರಿಗೂ ಅಕ್ಷತಾ ಮತ್ತು ರಾಕೇಶ್ ಮುಜುಗರ ತಂದಿದ್ದರು. ಹೀಗಾಗಿ ಅವರ ಮೇಲೆ ಬಿಗ್ ಬಾಸ್ ಮನೆಯ ಕ್ಯಾಮರಾ ಕಣ್ಣುಗಳು ಅಧಿಕವಾಗಿದ್ದುವು. ಹೀಗೆ ಸಿಕ್ಕಾಪಟ್ಟೆ ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡಿ ಮನೆಗೆ ಹೊಸ ಸದಸ್ಯರಾದ ಜೀವಿತ, ಮೇಘನ, ನಿವೇಧಿತ ಬಂದ ಬಳಿಕ ಚೇಂಜ್ ಆಗಿ ಹೋದರು.

ಈ ಬದಲಾವಣೆ ಹೀಗೆ ಮುಂದುವರೆದು ಸಾಕಷ್ಟು ವೈಮನಸ್ಸುಗಳಾಗಿ ಕೊನೆಗೂ ಅಕ್ಷತಾ ಮನೆಯಿಂದ ಹೊರಬಂದಿದ್ದಾರೆ. ಒಟ್ಟಿನಲ್ಲಿ ಅಕ್ಷತಾ ಮಾತ್ರ ತಮ್ಮ ಮೇಲಿರುವ ಗೌರವವನ್ನು ರಾಕೇಶ್ ನಿಂದಾಗಿ ಕಳೆದುಕೊಂಡರು. ಒಂದು ವೇಳೆ ರಾಕೇಶ್ ನಿಂದ ಅಕ್ಷತಾ ದೂರ ಉಳಿದಿದ್ದರೆ ಖಂಡಿತವಾಗಿಯೂ ಫಿನಾಲೆಗೆ ಅಕ್ಷತಾ ಹೋಗ್ತಾಯಿದ್ದರು ಅನ್ನೋದು ಅಧಿಕ ಜನರ ಅಭಿಪ್ರಾಯ.

Leave a Reply

Your email address will not be published.