ಅಸಭ್ಯ ಹೇಳಿಕೆ ವಿವಾದ – ಹಾರ್ದಿಕ್, ರಾಹುಲ್ ಸಸ್ಪೆಂಡ್ ; ಆಸ್ಟ್ರೇಲಿಯಾದಿಂದ ಮರಳಲು ಬಿಸಿಸಿಐ ಸೂಚನೆ

ಟಿವಿ ಶೋನಲ್ಲಿ ಮಹಿಳೆಯರ ಕುರಿತು ನೀಡಿದ್ದ ಅಸಭ್ಯ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಟೀಮ್ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಅವರನ್ನು ಅಮಾನತು ಮಾಡಲಾಗಿದೆ. ಸಸ್ಪೆಂಡ್ ಮಾಡಲಾಗಿರುವ ವಿಷಯವನ್ನು ಧೃಡಪಡಿಸಿರುವ ಬಿಸಿಸಿಐ, ಇಬ್ಬರೂ ಆಟಗಾರರಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿ ಕೂಡಲೇ ಭಾರತಕ್ಕೆ ಮರಳುವಂತೆ ಸೂಚಿಸಿದೆ.

ಬಿಸಿಸಿಐ ನೀತಿಸಂಹಿತೆ ನಿಯಮ 41 (6) ಅನುಸಾರ ಆಟಗಾರರನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಮುಗಿದು ತೀರ್ಪು ಹೊರಬರುವವರೆಗೆ ಬಿಸಿಸಿಐ ಅನುಮತಿಯಿಲ್ಲದೇ ಯಾವುದೇ ಪಂದ್ಯ, ಚಟುವಟಿಕೆ, ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿದೆ.

ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಪಾಪ್ಯುಲರ್ ಟಿವಿ ಶೋ ‘ಕಾಫೀ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಮಹಿಳೆಯರ ಬಗ್ಗೆ ಅನುಚಿತ, ಅಸಭ್ಯ ಎನಿಸುವಂತಹ ಹೇಳಿಕೆಗಳನ್ನು ನೀಡಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com