ಭರ್ಜರಿಯಾಗಿ ತೆರೆಕಂಡ ‘ಪೆಟ್ಟಾ’ ಸಿನಿಮಾ : ಚಿತ್ರಮಂದಿರದ ಮುಂದೆ ಮದುವೆಯಾದ ರಜನಿ ಫ್ಯಾನ್..!

ಇಂದು ಬಿಡುಗಡೆಯಾಗಿರುವ ರಜನಿ ಅಭಿನಯದ “ಪೆಟ್ಟಾ” ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಆದರೆ ವಿಷಯ ಇದಷ್ಟೇ ಅಲ್ಲ ರಜನಿಕಾಂತ್ ಅಭಿಮಾನಿಯೊಬ್ಬ ತಮಿಳುನಾಡಿನ ಚೆನ್ನೈ ನಗರದಲ್ಲಿನ ಚಿತ್ರಮಂದಿರದ ಮುಂದೆಯೇ ತಾಳಿ ಕಟ್ಟುವ ಮೂಲಕ ವಿವಾಹ ಮಾಡಿಕೊಂಡಿದ್ದು ಮೇರು ನಟನ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾನೆ.
ಅಂಬಸು, ಕಮಾಚಿ  ಎಂಬ ಯುವ ಜೋಡಿ ರಜನಿ ಅಭಿಮಾನಿಗಳಾಗಿದ್ದು ರಜನಿಕಾಂತ್ ಅಭಿನಯದ ಚಿತ್ರ ಬಿಡುಗಡೆಯಾದ ಮಹೂರ್ತವೇ ತಮಗೆ ಶುಭ ಮಹೂರ್ತ ಎಂದು ಬಗೆದ ಈ ಜೋಡಿ ಚಿತ್ರಮಂದಿರದ ಎದುರೇ ಮದುವೆಯಾಗಿದೆ. ಮದುವೆ ಕೂದ ಚೆನ್ನೈನ  ಉಡ್ ಲ್ಯಾಂಡ್ ಥಿಯೇಟರ್ ಮುಂಭಾಗದಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದೆ. ಅಲ್ಲೇ ಮದುವೆ ಮಂಟಪದ ವಯವಸ್ಥೆ ಮಾಡಲಾಗಿತ್ತು. ಮದುವೆ ಶಾಸ್ತ್ರಗಳೆಲ್ಲ ಸಂಪ್ರದಾಯದ ಅನುಸಾರ ನಡೆದಿವೆ. ಇನ್ನು ಈ ವಿವಾಹಕ್ಕೆ ರಜನಿ ಅಭಿಮಾನಿಗಳೇ ಬಂದು . ಬಳಕವಾಗಿದ್ದರು ಎನ್ನುವುದು ಮತ್ತೊಂದು ವಿಶೇಷ. ಚಿತ್ರ ವೀಕ್ಷಿಸಿದ ಪ್ರತೀಯೊಬ್ಬರೂ ಈ ನವಜೋಡಿಗಳನ್ನು ಹರಸಿ ಆಶೀರ್ವಾಧಿಸಿದ್ದಾರೆ.
ವಿವಾಹದ ಬಳಿಕ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಒಟ್ಟಾರೆ ರಜನಿ  ಮೇಲಿನ ಅಭಿಮ್ನಾನ ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿ ನಿಂತಿದೆ. ಇನ್ನು ಅನೇಕ ಕಡೆಗಳಲ್ಲಿ ಚಿತ್ರ ವೀಕ್ಷಿಸ ಬಂದ ಚಿತ್ರಪ್ರೇಮಿಗಳಿಗೆ ಪೊಂಗಲ್, ಸಿಹಿ ವಿತರಿಸಿ ಸಂಭ್ರಮಿಸಿರುವುದು ತಿಳಿದಿದೆ.

Leave a Reply

Your email address will not be published.

Social Media Auto Publish Powered By : XYZScripts.com