KSRP ತರಬೇತಿ ಶಾಲೆಯಲ್ಲಿ ಜೀತದಾಳು ಪದ್ಧತಿ : ವೈಯಕ್ತಿಕ ಕೆಲಸ ಮಾಡಿದ ಕಿರಿಯ ಸಿಬ್ಬಂದಿ

ಕೊಪ್ಪಳ ತಾಲೂಕಿನ ಮುನಿರಾಬಾದಿನ  ಕೆ. ಎಸ್. ಆರ್. ಪಿ. ತರಬೇತಿ ಶಾಲೆಯಲ್ಲಿ  ಹೆಡ್ ಕಾನ್ಸಟೇಬಲ್ ಹೆಚ್. ಹನುಮಂತಪ್ಪ ಎನ್ನುವವರು ಕಿರಿಯ ಪೊಲೀಸರಿಂದ ತಮ್ಮ ವೈಯಕ್ತಿಕ ಕೆಲಸಗಳನ್ನ ಮಾಡಿಕೊಳ್ಳುತ್ತಿರುವ ದೃಶ್ಯಗಳು ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ. ಕಿರಿಯ ಸಿಬ್ಬಂದಿಗಳನ್ನು ಜೀತದಾಳುಗಳಂತೆ ಹಿರಿಯ ಸಿಬ್ಬಂದಿ ಹನುಮಂತಪ್ಪ ದುಡಿಸಿಕೊಂಡಿದ್ದಾರೆ. ತಮ್ಮ ಬಟ್ಟೆ ಒಗೆಸಿಕೊಳ್ಳುವುದು ಮಾತ್ರದಲ್ಲದೇ ಶೇವಿಂಗ್ ಮಾಡಿಸಿಕೊಂಡಿರುವ ದೃಶ್ಯಗಳು ಪೊಲೀಸ್ ಇಲಾಖೆಯಲ್ಲಿ ಕಿರಿಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ.

ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯಬೇಕಾಗಿದ್ದ ಕಿರಿಯ ಸಿಬ್ಬಂದಿಗಳು ವೈಯಕ್ತಿಕ ಕೆಲಸಗಳನ್ನು ಮಾಡುತ್ತಿರುವುದು ತಿಳಿದು ಬಂದಿದೆ. ಆ ಮೂಲಕ ಖಾಕಿ ದರ್ಬಾರ್ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com