46ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್ – ನೆಟ್ಟಿಗರ ಮನಗೆದ್ದ ವೀರೂ ಶುಭಾಶಯ

ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್, ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಶುಕ್ರವಾರ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಾಹುಲ್ ದ್ರಾವಿಡ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

‘ನಜಾಫ್ ಗಢದ ಸಚಿನ್’ ಖ್ಯಾತಿಯ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, ತಮ್ಮ ಸಹ ಆಟಗಾರ ರಾಹುಲ್ ದ್ರಾವಿಡ್ ಹುಟ್ಟುಹಬ್ಬಕ್ಕೆ ಟ್ವಿಟರ್ ನಲ್ಲಿ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ‘ಗೋಡೆಗಳಿಗೂ ಕಿವಿಯಿರುತ್ತವೆ. ಆದರೆ ಈ ಗೋಡೆಗೆ ಪರಿಶುದ್ಧ ಮನಸ್ಸು ಮತ್ತು ಹೃದಯವೂ ಇದೆ, ದ್ರಾವಿಡ್ ಅವರೊಂದಿಗೆ ಆಡಿ ಅದ್ಭುತ ನೆನಪುಗಳನ್ನು ಸೃಷ್ಟಿಸಿದ್ದು ಅತ್ಯಂತ ಸಂತಸದ ಸಂಗತಿ ‘ ಎಂದು ವೀರು ಟ್ವೀಟ್ ಮಾಡಿದ್ದಾರೆ.

ಭಾರತದ ಪರ 164 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ದ್ರಾವಿಡ್ 13,288 ರನ್ ದಾಖಲಿಸಿದ್ದಾರೆ. 344 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿ 10,889 ರನ್ ಗಳಿಸಿದ್ದರು. ಭಾರತದ ಪರ ಏಕೈಕ ಟಿ-20 ಪಂದ್ಯವನ್ನಾಡಿದ್ದ ದ್ರಾವಿಡ್, 31 ರನ್ ಗಳಿಸಿದ್ದರು.

 

 

Leave a Reply

Your email address will not be published.

Social Media Auto Publish Powered By : XYZScripts.com