ಚಿಕ್ಕಬಳ್ಳಾಪುರದ ಕೃಷ್ಣ ಚಿತ್ರಮಂದಿರದ ಬಳಿ ಜನಜಂಗುಳಿ : ‘ವಿನಯ ವಿಧೇಯ ರಾಮ’ ಸಿನಿಮಾಕ್ಕೆ ಫಿದಾ ಆದ ಫ್ಯಾನ್ಸ್

ಇಂದು ತೆರೆ ಕಂಡ ರಾಮ್ ಚರಣ್ ಅಭಿನಯದ ತೆಲುಗು ಸಿನಿಮಾ ‘ವಿನಯ ವಿಧೇಯ ರಾಮ’ ಸಿನಿಮಾವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಇಂತಹ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರದ ಕೃಷ್ಣ ಚಿತ್ರಮಂದಿರದಲ್ಲಿ. ಹೌದು.. ರಂಗಸ್ಥಲಂ ಸಿನಿಮಾದ ಮೂಲಕ ಭಾರಿ ಹೆಸರು ಮಾಡಿದ ರಾಮ್ ಚರಣ್ ಸದ್ಯ ಮತ್ತೊಂದು ಸಿನಿಮಾದಲ್ಲಿ ಶೈನ್ ಆಗಿದ್ದಾರೆ. ರಂಗಸ್ಥಲಂ ಮೂಲಕ ಭಾರಿ ಪ್ರಮಾಣದಲ್ಲಿ ಅಭಿಮಾನಿಗಳ ಮನ ಗೆದ್ದ ಚರಣ್ ಸದ್ಯ ‘ವಿನಯ ವಿಧೇಯ ರಾಮ’ ದ ಮೂಲಕ ಝಲಕ್ ನೀಡಿದ್ದಾರೆ.

ಬೆಳಿಗ್ಗೆ ಪ್ರಾರಂಭವಾದ ಸಿನಿಮಾವನ್ನು ನೋಡಲು ಸೇರಿದ ಜನರನ್ನ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ತೆಲುಗು ಸಿನಿಮಾ ‘ವಿನಯ ವಿಧೇಯ ರಾಮ’ ನಲ್ಲಿ ನಟ ಚರಣ್ ಮಾರ್ಡನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಹಾಡುಗಳು ತೆರೆಗೂ ಮುನ್ನ ಸಾಕಷ್ಟು ವೈರಲ್ ಆಗಿದ್ವು. ರಂಗಸ್ಥಲಂ ನಲ್ಲಿ ಹಳ್ಳಿ ಹುಡುಗನಾಗಿ ಮುಂಚಿದ್ದ ಚರಣ್ ರನ್ನು ಸದ್ಯ ಮಾರ್ಡನ್ ಗೆಟಪ್ ನಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಒಟ್ನಲ್ಲಿ ಅಭಿಮಾನಿಗಳ ಕ್ರೇಜ್ ನೋಡುವುದಾದರೆ ಈ ಬಾರಿ ಚರಣ್ ಅಭಿನಯದ ‘ವಿನಯ ವಿಧೇಯ ರಾಮ’ ತೆಲುಗು ಸಿನಿಮಾ ಕೂಡ ಭಾರಿ ಸದ್ದು ಮಾಡುವುದಂತು ಗ್ಯಾರೆಂಟಿ.

Leave a Reply

Your email address will not be published.