ಶಿವಮೊಗ್ಗ ಜಿಲ್ಲೆಯ ಅರಳಗೋಡುವಿನಲ್ಲಿ ಹೆಚ್ಚಾದ ಮಂಗನ ಕಾಯಿಲೆ ಭೀತಿ : 58 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ

ಶಿವಮೊಗ್ಗ ಜಿಲ್ಲೆಯ ಅರಳಗೋಡು ಗ್ರಾಮಪಂಚಾಯಿತಿಯಲ್ಲಿ ಮಂಗನ ಕಾಯಿಲೆ ಭೀತಿ ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಹರಡುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಮಂಗನ ಕಾಯಿಲೆಯಿಂದ 6 ಜನ ಸಾವನ್ನಪ್ಪಿದ್ದಾರೆ, ಸಾಗರ್ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಸಾಕಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿಯೇ 58ಕ್ಕೂ ಹೆಚ್ಚು ಜನ ಮಂಗನ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರಿಂದ ಭೀತಿಗೊಂಡ ಅನೇಕ ಕುಟುಂಬಗಳು ಮನೆ ತೊರೆದಿವೆ. ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಕೆಲಸ ಕಾರ್ಯಗಳಿಗೆ ಹೋಗಲು ಆಗುತ್ತಿಲ್ಲ. ಚಳಿಗಾಲದಲ್ಲಿ ಹರಡುತ್ತಿರುವ ಸೊಂಕು ಯಾವುದರಿಂದ ಹರಡುತ್ತಿದೆ ಎನ್ನುವ ಮಾಹಿತಿ ಇಲ್ಲದೆ ಜನ ನೀರು ಕುಡಿಯಲು, ಆಹಾರ ಸೇವಿಸಲು ಭಯ ಪಡುತ್ತಿದ್ದಾರೆ.

ಕೇವಲ ಅರಳಗೋಡು ಮಾತ್ರವಲ್ಲದೇ ನೆರೆಯ ತೀರ್ಥಹಳ್ಳಿ, ಸೊರಬ, ಹೊಸನಗರದಲ್ಲಿಯೂ ಕಾಯಿಲೆ ಹರಡಿಕೊಂಡಿದೆ. ನಿನ್ನೆಯಷ್ಟೇ ಶಿವಮೊಗ್ಗದ ಬ್ಯಾಕ್ ವಾಟರ್ ಬಳಿ ಸಾವನ್ನಪ್ಪಿದ ಮಂಗಗಳಲ್ಲಿ ಕಂಡುಬಂದ ಹುಣ್ಣೆಗಳನ್ನ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಾಗಲೇ ಆಸ್ಪತ್ರೆಗಳಿಗೆ ಸಂಸದ ಬಿ,ವೈ ರಾಘವೇಂದ್ರ ಭೇಟಿ ನೀಡಿ ಕಾಯಿಲೆ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದ್ದು ಮುಂದಿನ ಹಂತದ ತನಿಖೆಗೆ ಹೆಚ್ಚುವರಿ ವೈದ್ಯರ ತಂಡ ಅವಶ್ಯವಿದೆ.

 

Leave a Reply

Your email address will not be published.

Social Media Auto Publish Powered By : XYZScripts.com