ಉಡುಪಿಯ ಮಲ್ಪೆ ಬೀಚ್ ನಲ್ಲಿ ಮೀನುಗಾರರು ನಾಪತ್ತೆ ಪ್ರಕರಣ : ಚುರುಕುಗೊಂಡ ಕಾರ್ಯಚರಣೆ

ಉಡುಪಿಯ ಮಲ್ಪೆ ಬೀಚ್ ನಲ್ಲಿ ಮೀನುಗಾರರು ನಾಪತ್ತೆ ಪ್ರಕರಣ ಸಂಬಂಧಿಸಿದಂತೆ ಕಾರ್ಯಚರಣೆ ಚುರುಕುಗೊಂಡಿದೆ.  ಗೋವಾ, ಮಹಾರಾಷ್ಟ್ರ, ಕೇರಳದ ಕರಾವಳಿಯಲ್ಲಿ ಕಳೆದುಹೋದ ಮೀನುಗಾರರನ್ನು ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ. ಆಳ ಸಮುದ್ರದ ಮೀನುಗಾರಿಕೆಗೆ  ಇಳಿದಿದ್ದಾರೆ. ಕಾರ್ಮಿಕರು ಮರುಳಿ  ಕೆಲಸಕ್ಕೆ ಹಾಜರಾಗಿದ್ದಾರೆ.  ಸಿಂಧುದುರ್ಗ ಹೊಳೆ ಬಳಿ ಶೋಧ ಕಾರ್ಯ ನಡೆದಿದೆ.  ಕೇರಳದ ಡಿಯೂ ಪ್ರಾಂತ್ಯದಲ್ಲಿ 10 ಪೊಲೀಸರು ಶೋಧ ನಡೆಸಿದ್ದಾರೆ.

ಉಡುಪಿಯ ಮಲ್ಪೆಯಲ್ಲಿ ಮೀನುಗಾರರು ನಾಪತ್ತೆಯಾಗಿ 28 ದಿನಗಳೇ ಕಳೆದಿವೆ. ಆದರೂ ಕೂಡ ಅವರು ಎಲ್ಲಿದ್ದಾರೆ ಅನ್ನೋ ಮಾಹಿತಿ ಯಾರಿಗೂ ಕೂಡ ಲಭ್ಯವಾಗಿಲ್ಲ. ಹೀಗಾಗಿ ಮೀನುಗಾರರನ್ನು ಕಳೆದುಕೊಂಡ ಕುಟುಂಬಸ್ಥರು ಮೋದಿಗೆ ಮನವಿ ಮಾಡಿದ್ದರು.

ಪರಿಣಾಮ ಕಾರ್ಯಚರಣೆ ಚುರುಕುಗೊಂಡಿದೆ. ಕಾಣೆಯಾದ ಮೀನುಗಾರರು ಗಡಿಯಲ್ಲಿ ಕಡಲುಗಳ್ಳರ ಬಲೆಗೆ ಸಿಕ್ಕಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಬಾಂಬೆ , ಗೋವಾ ಕರಾವಳಿಗಳಲ್ಲಿ 6 ಜನ ಮೀನುಗಾರರನ್ನು ಹುಡುಕುವ ಕಾರ್ಯ ಜೋರಾಗಿ ಸಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com