ತಂದೆ ಕೊಟ್ಟ ಶಾಕ್ ನಿಂದ ಆ್ಯಂಡಿ ಠುಸ್ ಪಟಾಕಿ : ಮತ್ತೆ ಶುರುವಾಯ್ತು ಆ್ಯಂಡಿ ಕಿರಿಕ್

ಬಿಗ್ ಬಾಸ್ ಎಂಥಾವರನ್ನೂ ಒಂದು ಕ್ಷಣಕ್ಕೆ ತಬ್ಬಿಬ್ಬಾಗಿಸಿಬಿಡ್ತಾರೆ ಅನ್ನೋದಕ್ಕೆ ನಿನ್ನೆ ಕೊಟ್ಟ ಟಾಸ್ಕೇ ಸಾಕ್ಷಿ. ಆ್ಯಂಡಿ ತಂದೆ ಹಾಗೂ ಆ್ಯಂಡಿ ಹೊರತುಪಡಿಸಿ ಮನೆಯ ಇನ್ನಿತರ ಸ್ಪರ್ಧಿಗಳೊಂದಿಗೆ ಆಡಿದ ಗೇಮ್ ಮಾತ್ರ ಸೂಪರ್ ಡೂಪರ್ ಆಗಿತ್ತು. ಆ್ಯಂಡಿ ಮನೆಯ ಸದಸ್ಯರಿಗೆ ಮಾಡಿದ ಕಿರಿಕಿರಿಯನ್ನ ಮನೆಯ ಸದಸ್ಯರು ಆ್ಯಂಡಿ ತಂದೆಯ ಬಳಿ ಹೇಳಿಕೊಳ್ಳಬೇಕು. ಅದನ್ನ ಕೇಳಿದ ಆ್ಯಂಡಿ ತಂದೆ ಆ್ಯಂಡಿಯನ್ನ ಮನೆಯಿಂದ ಕರೆದುಕೊಂಡು ಹೋಗಲು ನಿರ್ಧಾರ ಮಾಡಬೇಕು.

ಇದರಲ್ಲಿ ಯಾವುದೇ ಅನುಮಾನ ಆ್ಯಂಡಿಗೆ ಬರಕೂಡದು. ಬಿಗ್ ಬಾಸ್ ಸೂಚಿಸಿದ ಹಾಗೆ ನಡೆದ ಟಾಕ್ಸ್ ನಲ್ಲಿ ಆ್ಯಂಡಿ ಕೆಲವು ಗಂಟೆಗಳ ಕಾಲ ಠುಸ್ ಪಟಾಕಿ ಆಗಿಬಿಟ್ಟಿದ್ದರು. ತಂದೆ ಬಳಿ ಸಾರಿ ಕೇಳುತ್ತಾ. ಮತ್ತೊಮ್ಮೆ ಯಾರಿಗೂ ಬೇಸರ ಮಾಡುವುದಿಲ್ಲ ಎಂದು ಕೇಳಿಕೊಳ್ಳುತ್ತಿದ್ದರು. ಇನ್ನೇನು ಮನೆಯಿಂದ ಹೊರಹೋಗಬೇಕು ಅನ್ನುವಷ್ಟರಲ್ಲಿ ಆ್ಯಂಡಿ ಮುಖ ನೋಡಲು ಆಗದೆ ಇದೊಂದು ಟಾಸ್ಕ್ ಅಷ್ಟೇ ಅನ್ನೋ ವಿಚಾರ ತಿಳಿಯುತ್ತದೆ. ಇಲ್ಲಿಗೆ ಆ್ಯಂಡಿ ತಾನು ಹೊಸ ವರ್ಷಕ್ಕೆ ಬದಲಾಗಿದ್ದೇನೆ ಯಾರೊಂದಿಗೆ ಜಗಳ ಅಥವಾ ಬೇಸರ ತಂದಿಲ್ಲ ಎಂದು ಹೇಳಿಕೊಳ್ಳುತ್ತಾರಾದರೂ ಮತ್ತೆ ಅದೇ ಕಥೆ ಶುರು ಮಾಡಿದ್ದಾರೆ.

ಹೌದು.. ನಿನ್ನೆ ಊಟದ ವಿಚಾರಕ್ಕೆ ರಾಕೇಶ್ ಜೊತೆ ಜಗಳವಾಡಿದ ಆ್ಯಂಡಿ, ಜಗಳದ ವಿಚಾರ ಬಿಟ್ಟು ಬೇರೆಲ್ಲಾ ವೈಯಕ್ತಿಕ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಮನೆಯ ಸದಸ್ಯರೆಲ್ಲರಿಗೂ ಬೇಸರ ತಂದಿದೆ. ಈ ಜಗಳದಿಂದ ಆ್ಯಂಡಿ ಜಗಳವಾಡದೇ ಸ್ಪರ್ಧಿಗಳಿಗೆ ಬೇಸರ ಮಾಡದೇ ಇರುವುದಿಲ್ಲ ಎನ್ನುವುದು ಮಾತ್ರ ಖಚಿತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com