ನಾನು ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ : ಪದಚ್ಯುತ ಸಿಬಿಐ ನಿರ್ದೇಶಕ ವರ್ಮಾ

ಒಬ್ಬ ವ್ಯಕ್ತಿ ಮಾಡಿರುವ ಸುಳ್ಳು, ಸಾಕ್ಷ್ಯರಹಿತ ಹಾಗೂ ನಿಷ್ಪ್ರಯೋಜಕ ಆರೋಪಗಳ ಆಧಾರದಲ್ಲಿ ನನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಪದಚ್ಯುತ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಪ್ರತಿಕ್ರಿಯಿಸಿದ್ದಾರೆ.

ಆಯ್ಕೆ ಸಮಿತಿಯ ನಿರ್ಧಾರ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಹೇಳಿಕೆ ಬಿಡುಗಡೆಗೊಳಿಸಿರುವ ವರ್ಮಾ, ಸಿಬಿಐ ಸಂಸ್ಥೆಯು ಯಾವುದೇ ಬಾಹ್ಯ ಪ್ರಭಾವಗಳಿಗೆ ಒಳಗಾಗದೆ ಕಾರ್ಯನಿರ್ವಹಿಸಬೇಕು. ಸಂಸ್ಥೆಯ ಸಮಗ್ರತೆಯ ನಾಶಗೊಳಿಸಲು ಪ್ರಯತ್ನಗಳು ನಡೆಯುತ್ತಿದ್ದಾಗ ನಾನು ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದೆ. ಅದೇ ಸಂಗತಿಗಳು ಕೇಂದ್ರ ಸರ್ಕಾರದ ಆದೇಶ ಹಾಗೂ ಅಕ್ಟೋಬರ್ 23ರ ಸಿವಿಸಿ ವರದಿಯಲ್ಲಿ ಕಾಣಿಸುತ್ತಿದ್ದವು ಎಂದಿದ್ದಾರೆ.

179ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ವರ್ಮಾ ಅವರನ್ನು ಕೇಂದ್ರ ಗೃಹ ಸಚಿವಾಲಯದ ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣೆ ಮತ್ತು ಹೋಮ್ ಗಾರ್ಡ್ಸ್ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ. ವರ್ಮಾ ಅವರ ಹುದ್ದೆಯನ್ನು ಮತ್ತೆ ಹೆಚ್ಚುವರಿ ನಿರ್ದೇಶಕ ನಾಗೇಶ್ವರ ರಾವ್ ಅವರಿಗೆ ವಹಿಸಲಾಗಿದೆ. ಜ.31ರಂದು ಅಲೋಕ್ ವರ್ಮಾ ಸೇವೆಯಿಂದ ನಿವೃತ್ತರಾಗಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com