ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ ; ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಿಲ್ದಾಣದಲ್ಲಿ ಘಟನೆ

ಬೆಂಗಳೂರಿನ ಮೆಟ್ರೋ ರೈಲಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಗಳೂರಿನ ನ್ಯಾಷನ್ ಕಾಲೇಜ್ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮೆಟ್ರೋದಲ್ಲಿ ಭದ್ರತಾ ಸಿಬ್ಬಂದಿ ನಡುವೆಯೂ ಯುವಕನೊಬ್ಬ ಹಾರಿ ಮೆಟ್ರೋ ರೈಲಿನ ಹಳಿಗೆ ಬೀಳಲು ಯತ್ನಿಸಿದ್ದಾನೆ. ಮೆಟ್ರೋ ಆರಂಭವಾದಾಗಿನಿಂದ ಇಂತಹ ಪ್ರಯತ್ನ ಮೊದಲ ಬಾರಿಗೆ ನಡೆದಿದ್ದು ಯಾರೂ ಕೂಡ ಯುವಕನ ಆತ್ಮಹತ್ಯೆಯ ಪ್ರಯತ್ನದ ಬಗ್ಗೆ ಊಹಿಸಿರಲಿಲ್ಲ.

ಈ ಯುವಕನ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪೊಲೀಸರು ಹಾಗೂ ಸಿಬ್ಬಂದಿಯಿಂದ ವಿಚಾರಣೆ ಶುರುವಾಗಿದೆ. ಸದ್ಯಕ್ಕೆ ಮೆಟ್ರೋದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com