ತಮಿಳುನಾಡು ಕೃಷ್ಣಗಿರಿಯ ವ್ಯಾಪನಪಲ್ಲಿಯಲ್ಲಿ ಪೊಲೀಸರಿಗೆ ಕಲ್ಲು ಎಸೆದ ಗ್ರಾಮಸ್ಥರು..!

ತಮಿಳುನಾಡು ಕೃಷ್ಣಗಿರಿಯ ವ್ಯಾಪನಪಲ್ಲಿ ಪೊಲೀಸರಿಗೆ ಗ್ರಾಮಸ್ಥರು ಕಲ್ಲು ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2 ದಿನದಿಂದ ಹಿಂದೆ ಈ ಘಟನೆ ನಡೆದಿದ್ದು ಸದ್ಯ ವಿಡಿಯೋಗಳು ವೈರಲ್ ಆಗಿದೆ.

30 ಮಂದಿ ಬಂಧಿಸಿದ ಪೊಲೀಸರು ವ್ಯಾಪನಪಲ್ಲಿಯಲ್ಲಿ ಅಕ್ರಮ ಜಲ್ಲಿಕಟ್ಟಿಯನ್ನು ತಡೆಯಲು ಹೋಗಿದ್ದರು. ಈ ವೇಳೆ ಕೆಲವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ ಈ ವೇಳೆ ಗುಂಪಾಗಿ ಸೇರಿದ್ದ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ಎಸಿದಿದ್ದಾರೆ.

ಜಲ್ಲಿಕಟ್ಟಿಗೆ ಗ್ರಾಮಸ್ಥರು ಅನುಮತಿ ಪಡೆದಿರಲಿಲ್ಲ. ಸುಮಾರು ತಿಂಗಳುಗಳಿಂದ ಅಕ್ರಮ ಜಲ್ಲಿಕಟ್ಟಿಯನ್ನು ನಡೆಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಜಲ್ಲಿಕಟ್ಟಿ ನಿರ್ಮಾಣದಲ್ಲಿ ಇಡಿ ಗ್ರಾಮಸ್ಥರ ಕೈವಾಡವಿದೆ ಎಂದು ತಿಳಿದ ಪೊಲೀಸರು ಅಧಿಕ ಸಂಖ್ಯೆಯಲ್ಲಿ ವಿಚಾರಣೆಗೆಂದು ತೆರಳಿದ್ದಾರೆ. ಇದು ಅಕ್ರಮ ಎಂದು ಖಚಿತ ಪಡಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಸಿಲು ಮುಂದಾದಗ ಕಲ್ಲುತೂರಾಟ ನಡೆದಿದೆ.

ಇದರಲ್ಲಿ ಪೊಲೀಸರು ಸೇರಿದಂತೆ ಕೆಲವು ಗ್ರಾಮಸ್ಥರಿಗೂ ಗಾಯಗಳಾಗಿವೆ. ಘಟನೆಯಲ್ಲಿ ಭಾಗಿಯಾದ 30 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com