ನಗರದ ಜನರಿಗೆ ಜಲಮಂಡಳಿ ನೀಡಲಿದೆ ಶಾಕ್ : ಶೀಘ್ರವೇ ನೀರಿನ ಬೆಲೆ ಏರಿಕೆ ಸಾಧ್ಯತೆ..!

ಕರೆಂಟ್ , ಕೇಬಲ್ , ಪೆಟ್ರೋಲ್ ಬೆಲೆ ಏರಿಕೆ ಆಯ್ತು ಈಗ ನೀರಿನ ಸರದಿ. ಹೌದುಬೆಂಗಳೂರಿನ ಜನತೆಗೆ ಶೀಘ್ರವೇ ಹೀಗೊಂದು ಶಾಕ್ ಜಲಮಂಡಳಿ ನೀಡಲಿದೆ. ಶೇಕಡ 30 ರಿಂದ 35 ರಷ್ಟು ನೀರಿನ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಬಗ್ಗೆ ಜಲಮಂಡಳಿ ಕಾರ್ಯವನ್ನು ನಡೆಸುತ್ತಿದೆ. ಸದ್ಯದಲ್ಲೇ ಬೆಂಗಳೂರು ಜಲಮಂಡಳಿಯಿಂದ ನೀರಿನ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.

ಒಂದು ವೇಳೆ ಪರಿಷ್ಕರಣೆ ಬಳಿಕ ಆಯವ್ಯಯದಲ್ಲಿ ನಷ್ಟ ಕಂಡುಬಂದರೆ ನೀರಿನ ಬೆಲೆ ಕೂಡ ಏರಿಕೆಯಾಗುವುದು ಗ್ಯಾರೆಂಟಿ. ಏರಿಕೆ ವಿಚಾರ ಮಾತ್ರ ಬಹುತೇಕ ಖಚಿತವಾಗಿದ್ದು ಇಷ್ಟರಲ್ಲೇ ಜಲಮಂಡಳಿ ವಿಚಾರವನ್ನು ಪ್ರಸ್ತಾಪ ಮಾಡಲಿದೆಹೀಗಾಗಿ ಕರೆಂಟ್, ಕೇಬಲ್ ಹಾಗೂ ಪೆಟ್ರೋಲ್ ಹೆಚ್ಚಿನ ಹಣದೊಂದಿಗೆ ನೀರಿನ ಬಿಲ್ ಕೂಡ ಹೆಚ್ಚಾಗಿ ಪಾವತಿಸಲು ರೆಡಿಯಾಗಿ.

ಸಾವಿರ ಲೀಟರ್ ಗೆ 30 ರಿಂದ 35 ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದು ಬಿಡ್ಲ್ಯೂ ಎಸ್ ಎಸ್ ಬಿ ಕಾರ್ಯರೂಪಕ್ಕೆ ತರಲು ಸಜ್ಜುಗೊಳ್ಳುತ್ತಿದೆ. ಹೀಗಾಗಿ ನಗರದ ಜನರಿಗೆ ಶೀಘ್ರದಲ್ಲೇ ನೀರಿನ ಬೆಲೆ ಏರಿಕೆ ಶಾಕ್ ತಲುಪುದು ಬಹುತೇಕ ಖಚಿತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com