ಪೊಲೀಸ್ ಪೇದೆ ಬೈಕ್ ಸೇರಿ 2 ಅಂಗಡಿಗಳಲ್ಲಿ ಸಾವಿರಾರು ರೂಪಾಯಿ ದೋಚಿದ ಕಳ್ಳರು

ಸಾಮಾನ್ಯವಾಗಿ ಕಳ್ಳತನ ಆದರೆ ಪೊಲೀಸ್ ಬಳಿ ಹೋಗುವುದು ರೂಢಿ. ಆದರೆ ಪೊಲೀಸ್ ವಸ್ತುಗಳು ಕಳ್ಳತನ ಆದರೆ ಹೇಗಿರುತ್ತೆ..? ಹೀಗೊಂದು ಘಟನೆ ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾರುತಿ ನಗರದಲ್ಲಿ. ಮಧ್ಯರಾತ್ರಿಯಲ್ಲಿ ಮುಖ ಮುಚ್ಚಿಕೊಂಡು ರಸ್ತೆಗಿಳಿದ ಕಳ್ಳರು ಈ ಕೃತ್ಯ ಎಸೆಗಿದ್ದಾರೆ.

5 ಮನೆ, 2 ಅಂಗಡಿಗಳಿಗೆ ಕನ್ನ ಹಾಕಿದ ನಾಲ್ಕು ಜನ ಖದೀಮರು 25 ಸಾವಿರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಶಿಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಖತರ್ನಾಕ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇಂತಹ ಪ್ರಕರಣಗಳು ಸುತ್ತ ಮುತ್ತಲು ಮರುಕಳಿಸುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೆಚ್ಚಿದ್ದಾರೆ. ಸರಣಿ ಕಳ್ಳತನ ಮಾಡಿದ ಕಳ್ಳರು  ಪೊಲೀಸ್ ಪೇದೆ ಬೈಕ್ ಕೂಡ ಕದ್ದಿದ್ದಾರೆ. ಈ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com