‘ಆಪರೇಷನ್ ನಕ್ಷತ್ರ’ ಸಿನಿಮಾದ ಟೀಸರ್ ಬಿಡುಗಡೆ : ಚಿತ್ರದ ಕಥೆ ಹೇಗಿರಬಹುದು..?

ನಂದಕುಮಾರ್ ಎನ್, ಅರವಿಂದ ಮೂರ್ತಿ ಟಿ.ಎಸ್, ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳಮನೆ ನಿರ್ಮಿಸಿರುತ್ತಿರುವ ‘ ಆಪರೇಷನ್ ನಕ್ಷತ್ರ’ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ಶಿವಸೀನ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಇದೆ. ನಿರಂಜನ್ ಒಡೆಯರ್, ಯಜ್ಞಾ ಶೆಟ್ಟಿ, ಅದಿತಿ ಪ್ರಭುದೇವ, ಲಿಖಿತ್ ಸೂರ್ಯ, ದೀಪಕ್ ರಾಜ್ ಶೆಟ್ಟಿ, ಶಱರೀನವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್. ಮುಂತಾದವರು ತಾರಾಬಳಗದಲ್ಲಿ ಇದ್ದಾರೆ.

ಚಿತ್ರಕ್ಕೆ ಮಧುಸೂದನ್ ಅವರೇ ಕಥೆ, ಚಿತ್ಕಥೆ ಬರೆದಿದ್ದಾರೆ. ಹಣದ ಹಿಂದೆ ಹೋದವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಇದರಲ್ಲಿ ಹೇಳಲಾಗಿದೆಯಂತೆ.’ಆಪರೇಷನ್ ನಕ್ಷತ್ರ’ ಆಪರೇಷನ್ ನಕ್ಷತ್ರ ಅಂದ ಕೂಡಲೇ ಡಾ. ರಾಜ್ ಕುಮಾರ್ ಅವರ ಆಪರೇಷನ್ ಡೈಮಂಡ್ ರಾಕೆಟ್ ಚಿತ್ರ ನೆನಪಿಗೆ ಬರುತ್ತದೆ. ಈ ಚಿತ್ರದಂತೆ ಸಿನಿಮಾ ಹಿಟ್ಟಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

 

Leave a Reply

Your email address will not be published.

Social Media Auto Publish Powered By : XYZScripts.com