ಇನ್ನೂ ಕಡಿಮೆ ಆಗಿಲ್ಲ ಸುಳ್ವಾಡಿಯ ವಿಷ ಪ್ರಸಾದದ ಎಫೆಕ್ಟ್ : ಮತ್ತಾರು ಜನ ಆಸ್ಪತ್ರೆಗೆ ದಾಖಲು …

ಚಾಮರಾಜನಗರದ ಸುಳ್ವಾಡಿ ವಿಷ ಪ್ರಸಾದವನ್ನು ಸೇವಿಸಿ 16 ಜನ ಪ್ರಾಣಕಳೆದುಕೊಂಡ್ರೂ ಇನ್ನೂ ಕೂಡ ವಿಷದ ಎಫೆಕ್ಟ್ ಕಡಿಮೆಯಾಗಿಲ್ಲ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 6 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುಣಮುಖರಾಗಿದ್ದೇವೆಂದು ಭಾವಿಸಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದ 6 ಮಂದಿ ಮತ್ತೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹನೂರು ತಾಲೂಕಿನ ಎಂ.ಜಿ ದೊಡ್ಡಿ ಗ್ರಾಮದ ಮಲ್ಲಿಗ, ಕಮಲಾ , ವೀರಮ್ಮ  , ರೇಖಾ ಮತ್ತು ಪಳನಿಯಮ್ಮ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರಿಗೆ ವಿಪರೀತ  ಜ್ವರ , ವಾಂತಿ ಭೇದಿ, ಹೊಟ್ಟೆ  ನೋವು, ಹೊಟ್ಟೆ ಉರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com