‘ಹಲ್ಲುಕಚ್ಚಿಕೊಂಡು ನಾನು ಸರ್ಕಾರ ನಡೆಸುತ್ತಿಲ್ಲ’ ಯಡಿಯೂರಪ್ಪ ಅವರಿಗೆ ಸಿಎಂ ಪ್ರತಿಕ್ರಿಯೆ

‘ನಾನು ತುಂಬಾ ಇಕ್ಕಟ್ಟಿನಿಂದ ಸರ್ಕಾರ ನಡೆಸುತ್ತೇದ್ದೇನೆ, ನನಗೆ ಯಾವುದೇ ಸ್ವಾತಂತ್ರ ಇಲ್ಲ’ ಎನ್ನುವ ಮಾತುಗಳು ಪದೇ ಪದೇ ಹೇಳಿದ್ದಾರೆ ಒಬ್ಬ ಸಿಎಂ. ಒಬ್ಬ ಸಿಎಂಗೆ ಎಲ್ಲಾ ಇದ್ದು ಅಭಿವೃದ್ಧಿ ಮಾಡಲಾಗುತ್ತಿಲ್ಲ ಅಂದರೆ ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಉಸಿರುಕಗಟ್ಟುವ ವಾತಾವರಣ ಇದೆ ಅನ್ನೋದು ತಿಳುತ್ತದೆ ಅನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮಾತಿಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಈ ಗೊಂದಲಕ್ಕೆ ತೆರೆ ಎಳೆದ ಸಿಎಂ ತಾವು ಯಾವ ಸಂಕಷ್ಟದಲ್ಲೂ ಸರ್ಕಾರ ನಡೆಸುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಯಾವ ಭಿನ್ನಾಭಿಪ್ರಾಯಗಳೂ ಇಲ್ಲ. 5 ವರ್ಷಗಳ ಕಾಲ ಮೈತ್ರಿ ಸರ್ಕಾರ ಯಾವುದೇ ಅಡೆಚಣೆ ಇಲ್ಲದೆ ನಡೆಸುತ್ತೇವೆ. ಇದರ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಶಾಸಕಾಂಗ ಸಭೆಯಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸರ್ಕಾರ ನಡೆಸಲು ನನಗೆ ಉಸಿರು ನಿಂತೋಗ್ತಾಯಿದೆ ಎಂದು ಎಲ್ಲೂ ಹೇಳಿಲ್ಲ. ನನಗೆ ತೊಂದರೆಯಾಗುತ್ತಿದೆ ಎಂದು ನಾನು ಎಲ್ಲೂ ಪ್ರಸ್ತಾಪನೇ ಮಾಡಿಲ್ಲ. ಇದು ಸುಳ್ಳು ಸುದ್ದಿ ಎಂದು ಸಿಎಂ ಅನುಮಾನಗಳಿಗೆ ತೆರೆಎಳೆದರು.

ಈ ವೇಳೆ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ ಹೀಗಾಗಿ ಕೇಂದ್ರ ಸರ್ಕಾರದ 8ನೇ ತರಗತಿವರೆಗೆ ಹಿಂದಿ ಕಡ್ಡಾಯ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published.