ಭೀಕರ ಅಪಘಾತ..! ನಗರದ ಕೆ.ಆರ್ ಪುರಂನಲ್ಲಿ ಪಾದಚಾರಿಗಳಿಗೆ ಗುದ್ದಿದ ಕಾರು

ನಗರದ ಕೆ.ಆರ್ ಪುರಂನಲ್ಲಿ ರಬಸದಿಂದ ಬಂದ ಕಾರು ಇಬ್ಬರು ಪಾದಚಾರಿಗಳಿಗೆ ಗುದ್ದಿದ ಘಟನೆ ಬೆಳಕಿಗೆ ಬಂದಿದೆ. ಜನವರಿ 8 ರಂದು ಸಂಜೆ ಏಳು ಗಂಟೆಯ ಸುಮಾರಿಗೆ ಸರಸ್ವತಿ ನಗರದ ಗಲ್ಲಿಯಲ್ಲಿ ರಬಸವಾಗಿ ಬಂದ ಕಾರು ರಸ್ತೆ ಬದಿ ನಡೆಯುತ್ತಿದ್ದ ಇಬ್ಬರು ಮಹಿಳೆಯರಿಗೆ ಗುದ್ದಿಕೊಂಡು ಹೋಗಿದೆ. ಅದೇ ಸ್ಪೀಡ್ ನಲ್ಲಿ ಮುಂದೆ ಸಾಗಿದ ಕಾರು ಪಾರ್ಕ್ ಮಾಡಿದ್ದ ಬೈಕ್ ಹಾಗೂ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಘಟನೆ ನಡೆದ ಕೂಡಲೇ ಸ್ಥಳೀಯರು ಇಬ್ಬರು ಮಹಿಳೆಯರುನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಕಾರ್ ಚಾಲಕನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಡಿಕ್ಕಿ ಹೊಡೆದ ವಾಹನಗಳು ಡ್ಯಾಮೇಜ್ ಆಗಿವೆ.

ಅಪಘಾತಕ್ಕೊಳಗಾದ ಲತಾ ಮತ್ತು ಶೀಲ ಎನ್ನುವ ಮಹಿಳೆಯರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕೆ.ಆರ್.ಪುರಂ ನ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದ್ದು ವಿಚಾರಣೆ ಮಾಡಲಾಗುತ್ತಿದೆ.

Leave a Reply

Your email address will not be published.