ತುಮಕೂರು ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ : ರೋಗಿಗಳ ಸಮಸ್ಯೆಗಳನ್ನು ಆಲಿಸದ ಶಿವಾನಂದ ಪಾಟೀಲ್

ಇಂದು ತುಮಕೂರು ತುಮಕೂರು ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ ನೀಡಿದ್ದು ರೋಗಿಗಳ ಸಮಸ್ಯೆಗಳನ್ನು ಆಲಿಸದ ಶಿವನಂದ ಪಾಟೀಲ್ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಆವರಣದಲ್ಲಿ ನೆಲೆದ ಮೇಲೆ ಮಲಗಿದ್ದ ಬಾಲಕಿಯ ಕಡೆಗೂ ನೋಡದೇ ವಿಚಾರಿಸದೆ ಸಚಿವರು ಹೊರಟಿರುವ ದೃಶ್ಯಗಳು ಕಂಡಬಂದಿವೆ.

ಆರೋಗ್ಯ ಸಚಿವರೇ ನೀವೇ ಹೀಗಾದರೆ ಬೇರೆಯವರ ಕಥೆಯೇನು..? ಎನ್ನುವ ಪ್ರಶ್ನೆ ಉದ್ಬವವಾಗಿದೆ. ರೋಗಿಗಳನ್ನು ಸಮಸ್ಯೆಗಳನ್ನು ಆಲಿಸದೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಚಿವರೇ ನಿರ್ಲಕ್ಷ್ಯ ತೋರಿದ್ದಾರೆ. ನೆಲದ ಮೇಲೆ ಮಲಗಿದ್ದ ಬಾಲಕಿಯನ್ನ ನೋಡಿಯೂ ನೋಡದಂತೆ ಸಚಿವರು ಮುಂದೆಸಾಗಿದ್ದು ಬೇಸರ ತಂದಿದೆ. ಒಂದು ಸಾಮಾನ್ಯ ಕಾಳಜಿಗೂ ಈ ಬಾಲಕಿ ನೆಲದ ಮೇಲೆ ಯಾಕೆ ಮಲಗಿದೆ ಎನ್ನುವ ಪ್ರಶ್ನೆಯನ್ನ ಕೇಳಲಿಲ್ಲ ಸಚಿವರು. ಈ ಬಾಲಕಿ ವಿಚಾರ ಬಿಡಿ ಆಸ್ಪತ್ರೆಯ ರೋಗಿಗಳನ್ನೂ ಮಾತನಾಡಿಸದೆ ಅವರ ಸಮಸ್ಯೆಗಳನ್ನ ಕೇಳದೇ ಸಚಿವರು ಹೋಗಿದ್ದಾರೆ. ವೈದ್ಯರೊಂದಿಗೆ ಮಾತ್ರ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.

ಇತ್ಯಾವ ಕಾರಣಕ್ಕೆ ಆರೋಗ್ಯ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದರು..? ಅನ್ನೋ ಪ್ರಶ್ನೆ ಈಗ ಎಲ್ಲರಿಗೂ ಎದುರಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com