Bigg Boss 6 : ಮನೆಯ ಸ್ಪರ್ಧಿಗಳಿಗೆಲ್ಲ ಕಿರಿಕಿರಿ ಮಾಡಿದ ಆ್ಯಂಡಿಗೆ ತಂದೆ ಕೊಟ್ಟ ಶಿಕ್ಷೆ ಏನು ಗೊತ್ತಾ..?

ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತಿದ್ದ ಆ್ಯಂಡಿಯನ್ನ ಕಂಡರೆ ಇಷ್ಟ ಪಡುವವರಿಗಿಂತ ಬೇಡಪ್ಪ ಸಹವಾಸ ಅಂದುಕೊಳ್ಳುವ ಸ್ಪರ್ಧಿಗಳೇ ಹೆಚ್ಚು. ಯಾಕಂದರೆ ಆ್ಯಂಡಿಯನ್ನು ಇಷ್ಟಪಡುವವರಿಗಿಂತ ಇಷ್ಟ ಪಡದವರೇ ಹೆಚ್ಚು ಜನ. ಹೀಗಾಗಿ ಸದಾ ಕಿರಿಕಿಯನ್ನುಂಟು ಮಾಡುವ ಆ್ಯಂಡಿಯನ್ನ ಮನೆಯಿಂದ ಹೊರಕಳಿಸಲು ಸ್ಪರ್ಧಿಗಳು ಪ್ರಯತ್ನಿಸುತ್ತಲೇ ಇರುತ್ತಾರೆ.

ಅಷ್ಟಕ್ಕೂ ಆ್ಯಂಡಿ ಮಾಡಿದ ಅಂತಹ ದೊಡ್ಡ ತಪ್ಪುಗಳಾದರೂ ಏನು..? ಅನ್ನೋದನ್ನ ಒಂದು ಬಾರಿ ನೆನಪು ಮಾಡಿಕೊಳ್ಳೋಣ.

ಮೊದಲನೇಯದ್ದು – ತಿನ್ನೋ ಆಹಾರಕ್ಕೆ ಖಾರದ ಪುಡಿ ಹಾಕಿದ್ದು

ಎರಡನೇಯದ್ದು – ಕಣ್ಣಿಗೆ ಪರ್ಫ್ಯೂಮ್ ಹಾಕಿದ್ದು

ಮೂರನೇಯದ್ದು –  ಶಶಿ ಕೋಪ ಹೆಚ್ಚುವಂತೆ ಮಾಡಿ ಶಶಿ ಕೈ ಹೊಡೆದುಕೊಂಡಿದ್ದು

ನಾಲ್ಕು – ಕವಿತಾ ಪ್ರೀತಿಸುತ್ತೇನೆ ಎಂದು ಕವಿತಾ ಟಾರ್ಗೇಟ್ ಮಾಡಿದ್ದು

ಐದು – ಹೆಚ್ಚು ಸಮಯದಲ್ಲಿ ಆಟ ಚೆನ್ನಾಗಿ ಆಡಲು ಪ್ರೇರೇಪಿಸುವುದಕ್ಕಿಂತ ನಿಲ್ಲಿಸುವಂತೆ ನಡೆದುಕೊಂಡಿದ್ದೇ ಹೆಚ್ಚು

ಆರು – ಪ್ರತಿಯೊಬ್ಬ ಮನೆಯ ಸದಸ್ಯರೊಂದಿಗೆ ಒಂದಿಲ್ಲಾ ಒಂದು ಕಾರಣಗಳಿಗೆ ಜಗಳವಾಡಿದ್ದಾರೆ ಆ್ಯಂಡಿ

ಹೀಗೆ ಹೇಳ್ತಾ ಹೋದರೆ ಒಂದಾ ಎರೆಡಾ. ಆ್ಯಂಡಿ ಮಾಡಿದ ತಪ್ಪಿನಿಂದ ಮನೆಯಿಂದ ಆಚೆ ಬರುತ್ತಾರೆ ಎನ್ನುವ ಗಾಸಿಪ್ ಗಳು ಇತ್ತಾದರೂ ಆ್ಯಂಡಿ ಇನ್ನೂ ಕೂಡ ಆಟ ಮುಂದುವರೆಸಿದ್ದಾರೆ. ಹೀಗಿರುವಾಗ ಸ್ಪರ್ಧಿಗಳನ್ನ ನೋಡಲು ಬಂದ ಕುಟುಂಬಸ್ಥರು ಸಂತೋಷದಿಂದ ಮಾತನಾಡಿಸಿ ಹೋದರೆ ಆ್ಯಂಡಿ ತಂದೆ ಮಾತ್ರ ಗರಂ ಆಗಿದ್ರು. ಆ್ಯಂಡಿ ಯನ್ನು ನೋಡಿಕೊಂಡು ಒಂದೊಳ್ಳೆ ಮಾತನಾಡಬೇಕಾಗಿದ್ದ ತಂದೆ ಆ್ಯಂಡಿಯನ್ನ ಮನೆಯಿಂದ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ. ಹಾಗಾದರೆ ಆ್ಯಂಡಿ ತಂದೆ ಬಿಗ್ ಬಾಸ್ ಮನೆಯಿಂದ ಆ್ಯಂಡಿಯನ್ನ ಕರೆದುಕೊಂಡು ಹೋಗುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

 

Leave a Reply

Your email address will not be published.