ಅಯೋಧ್ಯೆ ವಿವಾದ : ಜ.29 ರಂದು ಮುಂದೂಡಿಕೆ – ಹೊಸ ಪೀಠದಿಂದ ಪ್ರಕರಣದ ವಿಚಾರಣೆ

ದಶಕಗಳ ಆಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಲಾಗಿದೆ. ಬಾಬ್ರಿ ಮಸೀದಿ ರಾಮಜನ್ಮಭೂ ವಿವಾದ ಪ್ರಕರಣದ ವಿಚಾರಣೆಯಿಂದ ಪಂಚಪೀಠ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಉದಯ್ ಲಲಿತ್ ಹಿಂದೆ ಸರಿದಿದ್ದಾರೆ. ಉದಯ್ ಲಲಿತ್ ವಿಚಾರಣೆಯಲ್ಲಿ ಇರಲು ರಾಜೀವ್ ಧವನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಹಿಂದೆ ಸರಿದ ಉದಯ್ ಲಲಿತ್ ಸ್ಥಾನಕ್ಕೆ ಬೇರೊಬ್ಬರು ಬರಲು ಕಾಲವಕಾಶ ಬೇಕಾಗಿದ್ದು ಪರಿಣಾಮ ಪ್ರಕರಣ ಜನವರಿ 29 ಕ್ಕೆ ಮುಂದೂಡಲಾಗಿದೆ. ಹೊಸ ಪೀಠ ರಚಿಸಲು ಸಿಜೆಐ ತೀರ್ಮಾನ ಮಾಡಿದ್ದು, ಹೊಸ ಪೀಠ ರಚನೆಯ ಬಳಿಕ ಸುಪ್ರಿಂ ಕೋರ್ಟ್ನ ಸಂವಿಧಾನಿಕ ಪೀಠದಲ್ಲಿ ಆಯೋಧ್ಯ ವಿವಾದದ ವಿಚಾರಣೆ ಮುಂದುವರೆಯಲಿದೆ.

ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಿರಂತರವಾಗಿ ನಡೆಯುತ್ತಾ..? ಅಥವಾ ಕಾಲಾವಕಾಶ ತೆಗೆದುಕೊಳ್ಳಲಾಗುವುದಾ ಎನ್ನುವ ಬಗ್ಗೆ ಜನವರಿ 29ರಂದೇ ತಿಳಿಯಲಿದೆ. ಜೊತೆಗೆ ಮುಸ್ಲಿಂ ಸಮುದಾಯಕ್ಕೆ ಯಾವುದೇ ಜಾಗ ನೀಡಬಾರದು, ಹಿಂದೂ ಗಳಿಗೆ ಸಂಪೂರ್ಣ ಜಾಗವನ್ನು ನೀಡಲಾಗುತ್ತಾ ಅನ್ನೋದನ್ನ ತಿಳಿಯಲು ಇನ್ನೂ 18 ದಿನಗಳು ಕಳೆದ ನಂತರ ತಿಳಿಯಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com