ಬರಿಗಾಗಲ್ಲಿ ಯಾವುದರ ಮೇಲೆ ನಡೆದಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದ್ದು…?

ಪ್ರತೀದಿನ ಸ್ವಲ್ಪ ದೂರ ನಡೆಯುವುದು ಆರೋಗ್ಯಕ್ಕೆ ಒಳ್ಳೆದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.  ಇದು ನಿಜವಾದರೂ ಕೇವಲ ನಡೆದಾಡುವುದರಿಂದ ಮಾತ್ರ ಸಂಪೂರ್ಣ ಆರೋಗ್ಯ ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿರುವ ವಯಸ್ಸಾದ ಜನರನ್ನು ನೋಡಿದರೆ ಅವರು ನಗರ ಪ್ರದೇಶದ ಯುವಕರಿಗಿಂತ ಕಟ್ಟುಮಸ್ತಾಗಿ ಆರೋಗ್ಯವಾಗಿರುತ್ತಾರೆ. ಇದಕ್ಕೆಲ್ಲಾ ಕಾರಣ ಪ್ರಕೃತಿ.

ಹೌದು.. ಪ್ರಕೃತಿ ಜತೆಯಲ್ಲೇ ಇರುವುದು ಗ್ರಾಮೀಣ ಭಾಗದವರ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ ಹುಲ್ಲಿನಲ್ಲಿ ನಡೆಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಇವೆ ಎಂದು ಹೇಳಿವೆ. ಯಾವೆಲ್ಲಾ ಲಾಭಗಳು ನಮಗೆ ಸಿಗಲಿದೆ ಎಂದು ತಿಳಿಯೋಣ.

ಮೂಳೆಗಳ ಆರೋಗ್ಯಕ್ಕಾಗಿ ಹುಲ್ಲಿನಲ್ಲಿ ನಡೆದಾಡುವುದರಿಂದ ಮೂಳೆಗಳ ಆರೋಗ್ಯವು ಉತ್ತಮವಾಗುವುದು. ಸಂಧಿವಾತದಂತಹ ಸಮಸ್ಯೆಯನ್ನು ಇದು ತಡೆಯುವುದು. ಬೆಳಿಗ್ಗೆ ನೀವು ಹುಲ್ಲಿನಲ್ಲಿ ನಡೆದಾಡುವಾಗ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿ ದೇಹಕ್ಕೆ ಸೇರಿಕೊಳ್ಳುತ್ತದೆ. ಇದು ಆರೋಗ್ಯಕರ ಮೂಳೆಗಳಿಗೆ ತುಂಬಾ ಒಳ್ಳೆಯದು.

ಬೆಳಿಗ್ಗೆ ಹುಲ್ಲಿನಲ್ಲಿ ನಡೆದಾಡುವುದರಿಂದ ಕಾಲಿನ ಭಾಗಗಳು ಒದ್ದೆಯಾಗುವುದು. ಸೂರ್ಯನ ಬೆಳಕಿನಲ್ಲಿರುವ ಕೆಲವೊಂದು ಪ್ರಮುಖ ಅಂಶಗಳು ದೇಹವನ್ನು ಸೇರಿಕೊಳ್ಳುತ್ತದೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ ದಿನವಿಡಿ ನೀವು ಉಲ್ಲಾಸಿತರಾಗಿರುವಂತೆ ಮಾಡುತ್ತದೆ. ಇದು ದೇಹದ ನರ ಹಾಗೂ ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ದೇಹದಲ್ಲಿರುವ ಕೀಟಾಣುಗಳನ್ನು ಹೊರಹಾಕುತ್ತದೆ.

ಚಪ್ಪಲಿ ಧರಿಸದೆ ಹುಲ್ಲಿನ ಮೇಲೆ ನಡೆದಾಡಿದರೆ ಭೂಮಿಯ ಆಯಸ್ಕಾಂತೀಯ ಶಕ್ತಿಯ ಸಂಪರ್ಕವಾಗುತ್ತದೆ. ಇದರಿಂದ ದೇಹದಲ್ಲಿನ ವಿದ್ಯುತ್ಕಾಂತೀಯ ಮತ್ತು ಆಯಸ್ಕಾಂತೀಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಕೆಲವೊಂದು ರೋಗಗಳಿಗೆ ಕಾರಣವಾಗುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತದೆ. ಇದರಿಂದ ದೇಹವು ಸ್ವಚ್ಛವಾಗುವುದು.
 ಬೆಳಗ್ಗಿನ ಅವಧಿಯಲ್ಲಿ ಪ್ರಕೃತಿಯಲ್ಲಿರುವ ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸಿ ದೇಹವು ಪುನರ್ಚೇತನಗೊಳ್ಳುವಂತೆ ಮಾಡುತ್ತದೆ. ಸೂರ್ಯನ ಬಿಸಿ ಕಿರಣಗಳು, ಸ್ವಚ್ಛ ಗಾಳಿ ಮತ್ತು ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸುವುದು.

Leave a Reply

Your email address will not be published.

Social Media Auto Publish Powered By : XYZScripts.com