Ranji Trophy : ಕರ್ನಾಟಕದ ವಿರುದ್ಧ ಬರೋಡಾಕ್ಕೆ 2 ವಿಕೆಟ್ ರೋಚಕ ಗೆಲುವು

ವಡೋದರಾದ ಮೋತಿ ಬಾಘ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ಆತಿಥೇಯ ಬರೋಡಾ 2 ವಿಕೆಟ್ ರೋಚಕ ಜಯ ದಾಖಲಿಸಿದೆ.

ಗೆಲ್ಲಲು 110 ರನ್ ಗುರಿಯನ್ನು ಬೆನ್ನತ್ತಿದ್ದ ಬರೋಡಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಗೆಲುವಿನ ದಡ ಸೇರಿತು. ಬರೋಡಾ ಪರವಾಗಿ ಯೂಸುಫ್ ಪಠಾಣ್ ಗರಿಷ್ಟ 41 ರನ್ ಗಳಿಸಿದರು. ಕರ್ನಾಟಕದ ಪರವಾಗಿ ಪ್ರಸಿಧ್ ಕೃಷ್ಣಾ 3, ಶ್ರೇಯಸ್ ಗೋಪಾಲ್ 2 ಹಾಗೂ ರೋನಿತ್ ಮೋರೆ 2 ವಿಕೆಟ್ ಪಡೆದರು.

ಎಲಿಟ್ ಗ್ರೂಪ್ ಎ ಮತ್ತು ಬಿ ಪಾಯಿಂಟ್ ಪಟ್ಟಿಯಲ್ಲಿ ಕರ್ನಾಟಕ 27 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ಕರ್ನಾಟಕ 3ರಲ್ಲಿ ಗೆದ್ದಿದ್ದು 2ರಲ್ಲಿ ಸೋಲು ಕಂಡಿದೆ. ಇನ್ನುಳಿದ ಮೂರು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

Leave a Reply

Your email address will not be published.

Social Media Auto Publish Powered By : XYZScripts.com