WATCH : ಧೋನಿಯ ಹೆಲಿಕಾಪ್ಟರ್ ಶಾಟ್ ಅನುಕರಿಸಿದ ಗ್ಲೆನ್ ಮ್ಯಾಕ್ಸ್ವೆಲ್ – ವಿಡಿಯೋ ವೈರಲ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸ್ಟ್ರೇಟ್ ಡ್ರೈವ್, ತಿಲಕರತ್ನೆ ಡಿಲ್ಶಾನ್ ದಿಲ್ ಸ್ಕೂಪ್, ವೀರೇಂದ್ರ ಸೆಹ್ವಾಗ್ ಅಪ್ಪರ್ ಕಟ್, ಕೆವಿನ್ ಪೀಟರ್ಸನ್ ‘ಸ್ವಿಚ್ ಹಿಟ್’ ಇನ್ನೂ ಕೆಲವು ಶಾಟ್ ಗಳು ಕ್ರಿಕೆಟ್ ಲೋಕದಲ್ಲಿ ಅತ್ಯಂತ ಫೇಮಸ್. ಎಮ್.ಎಸ್ ಧೋನಿಯ ಹೆಲಿಕಾಪ್ಟರ್ ಶಾಟ್ ಕೂಡ ಇದೇ ಲಿಸ್ಟ್ ಗೆ ಸೇರುತ್ತದೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಾರಿಸುವ ‘ಹೆಲಿಕಾಪ್ಟರ್ ಶಾಟ್’, ಕ್ರಿಕೆಟ್ ಲೋಕದಲ್ಲಿ ಅವರ ಟ್ರೇಡ್ ಮಾರ್ಕ್ ಶಾಟ್ ಎಂದೇ ಕರೆಯಲ್ಪಡುತ್ತದೆ. ವೇಗವಾಗಿ ನುಗ್ಗಿ ಬರುವ ಯಾರ್ಕರ್ ಎಸೆತವನ್ನು, ವೃತ್ತಾಕಾರದಲ್ಲಿ ಬ್ಯಾಟ್ ತಿರುಗಿಸಿ ಚೆಂಡನ್ನು ಬೌಂಡರಿಯಾಚೆಗೆ ಸಿಕ್ಸರ್ ಅಟ್ಟುವ ರೀತಿ ಮನಮೋಹವಾಗಿರುತ್ತದೆ.

ಮಹೇಂದ್ರ ಸಿಂಗ್ ಧೋನಿಯ ಈ ‘ಹೆಲಿಕಾಪ್ಟರ್ ಶಾಟ್’ ಹೊಡೆತವನ್ನು ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಅನುಕರಿಸಲು ಯತ್ನಿಸಿದ್ದಾರೆ. ಇಲ್ಲಿದೆ ವಿಡಿಯೋ

Leave a Reply

Your email address will not be published.