ಹೀಗೂ ಉಂಟು – ಅನೈತಿಕ ಸಂಬಂಧದ ಶಂಕೆ ಬಂದರೆ ಪತ್ನಿಯೂ ಪತಿಯನ್ನ ಸುಡುತ್ತಾಳೆ..!

ಅನೈತಿಕ ಸಂಬಂಧದ ಶಂಕೆ ಬಂದರೆ ಗಂಡಂದಿರು ಮಾತ್ರ ಪತ್ನಿಯರನ್ನ ಬೆಂಕಿ ಹಚ್ಚಿ ಸುಡುತ್ತಿದ್ದ ಪ್ರಕರಣಗಳನ್ನ ಕೇಳುತ್ತಿದ್ದೆವು. ಆದರೆ ಮೈಸೂರಿನಲ್ಲಿ ಪತ್ನಿ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆಸಿದೆ.

ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ ಪತ್ನಿ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಉದಯಗಿರಿಯ ಸತ್ಯಾನಗರದಲ್ಲಿ ಈ ಘಟನೆ ನಡೆದಿದೆ. ಮಹಜರ್ ಪಾಷಾ(45)ಗಾಯಗೊಂಡ ಪತಿ. ಪತಿಗೆ ಬೆಂಕಿ ಹಚ್ಚಿದ ಪತ್ನಿ ಮಮ್ತಾಜ್(44)  ಬಂಧಿಸಲಾಗಿದೆ. ಸಾವು ನೋವಿನ ಮಧ್ಯೆ ಪತಿ ನರಳುತ್ತಿದ್ದು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

23 ವರ್ಷಗಳ ಹಿಂದೆ ಮಮ್ತಾಜ್ ಹಾಗೂ ಮಹಜರ್ ಪಾಷಾ ವಿವಾಹವಾಗಿದ್ದರು. ದಂಪತಿಗೆ ೬ ಮಕ್ಕಳಿದ್ದಾರೆ. ಮಹಜರ್ ಪಾಷ ಆಟೋ ಡ್ರೈವರ್ ಆಗಿದ್ದು,  ಗಂಡನ ಅನೈತಿಕ ಸಂಬಂಧದ ಬಗ್ಗೆ ದಂಪತಿ ನಡುವೆ ಜಗಳ ಉಂಟಾಗಿದೆ. ರಾತ್ರಿ ಮಲಗಿದ್ದ ವೇಳೆ ಮಹಜರ್ ಪಾಷಾ ಮೇಲೆ ಪೆಟ್ರೋಲ್ ಸುರಿದು ಮಮ್ತಾಜ್ ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ.ನ್ಯಾಯಾಂಗ ಬಂಧನಕ್ಕೆ ಮಮ್ತಾಜ್

ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com