ಕನ್ನಡಕ್ಕೆ ಡಬ್ ಆಗಲಿದೆಯಾ ಸೂಪರ್ ಸ್ಟಾರ್ ರಜಿನಿಕಾಂತ್ ‘ ಪೆಟ್ಟಾ’ ಸಿನಿಮಾ..?

ದೇಶದಲ್ಲಿ ಭಾರಿ ಸದ್ದು ಮಾಡಿದ ‘ಪೆಟ್ಟಾ’ ಸಿನಿಮಾ ರಿಲೀಸ್ ಆಗ್ತಾಯಿಂದಂಗೆ ಈ ಸಿನಿಮಾ ಕನ್ನಡದಲ್ಲಿ ಡಬ್ ಆಗಬೇಕು ಅನ್ನೋ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಜನವರಿ 10ಕ್ಕೆ ರಿಲೀಸ್ ಆಗುವ ಸೂಪರ್ ಸ್ಟಾರ್ ಅಭಿನಯದ ‘ಪೆಟ್ಟಾ’ ಸಿನಿಮಾಕ್ಕೆ ಕನ್ನಡದ ಮಂದಿ ಫಿದಾ ಆಗಿದ್ದಾರೆ. ಕನ್ನಡದವರೇ ಆದ ರಜನಿಕಾಂತ್ ಅವರ ಸಿನಿಮಾ ಕನ್ನಡದಲ್ಲಿ ಡಬ್ ಆಗಲಿ ಅನ್ನೋದು ಕನ್ನಡ ಅಭಿಮಾನಿಗಳ ಆಸೆಯಾಗಿದೆ. ಇದಕ್ಕೆ ಕಿವಿಕೊಟ್ಟ ವಿತರಕ ಜಾಕ್ ಮುಂಜು ಪೆಟ್ಟಾ ಮೂವಿ ಡಬ್ ಮಾಡುವ ಪಟ್ಟು ಹಿಡಿದಿದ್ದಾರೆ.

ಸೂಪರ್ ಸ್ಟಾರ್ ಮ್ಯಾನರಿಸಂಗೆ ಕನ್ನಡಿಗರೂ ಫಿದಾ ಆದ ಕನ್ನಡಿಗರ ಅಭಿಪ್ರಾಯಕ್ಕೆ ಸ್ಯಾಂಡಲ್ ವುಡ್ ಒಪ್ಪಿದ್ದು ಡಬ್ ಗೆ ರಜನಿಕಾಂತ್ ಒಪ್ಪಬೇಕಿದೆ. 38 ವರ್ಷಗಳ ಹಿಂದೆ ‘ಘರ್ಜನೆ’ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರು ರಜಿನಿಕಾಂತ್. ಆ ಬಳಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿರಲಿಲ್ಲ ಸೂಪರ್ ಸ್ಟಾರ್. ಜೊತೆಗೆ ಅವರ ಯಾವ ಸಿನಿಮಾಗಳೂ ಕನ್ನಡಕ್ಕೆ ಡಬ್ ಆಗಿರಲಿಲ್ಲ. ಒಂದು ವೇಳೆ ಕನ್ನಡಿಗರ ಆಸೆಯಂತೆ ಪೆಟ್ಟಾ ಸಿನಿಮಾ ಕನ್ನಡಕ್ಕೆ ಡಬ್ ಆದರೆ ಹೊಸ ದಾಖಲೆ ಸೃಷ್ಟಿಯಾಗುವುದರಲ್ಲಿ ನೋ ಡೌಟ್.

ಈಗಾಗಲೇ ಜಾಕ್ ಮುಂಜು ಈ ಬಗ್ಗೆ ಪೆಟ್ಟಾ ತಂಡದವರೊಂದಿಗೆ ಮಾತನಾಡಿದ್ದು, ತಂಡದವರು ರಜನಿಕಾಂತ್ ಜೊತೆ ಮಾತನಾಡಲಿದ್ದಾರೆ. ಒಂದು ವೇಳೆ ರಜನಿಕಾಂತ್ ಒಪ್ಪಿದರೆ 38 ವರ್ಷದ ಬಳಿಕ ಕನ್ನಡದಲ್ಲಿ ರಜಿನಿಕಾಂತ್ ಧ್ವನಿಯಲ್ಲಿ ಸಿನಿಮಾ ನೋಡಬಹುದು ಎಂದು ಪೆಟ್ಟಾ ಸಿನಿಮಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಹೇಳಿದ್ದಾರೆ. ಒಂದು ವೇಳೆ ಪೆಟ್ಟಾ ಸಿನಿಮಾ ಕನ್ನಡದಲ್ಲಿ ಡಬ್ ಆದರೆ ಪೆಟ್ಟಾ ತೊಟ್ಟು, ಪಂಚೆ ಕಟ್ಟಿದ ಸೂಪರ್ ಸ್ಟಾರ್ ಕನ್ನಡದಲ್ಲಿ ಧೂಳೆಬ್ಬಿಸೋದಂತು ಗ್ಯಾರೆಂಟಿ.

 

 

 

Leave a Reply

Your email address will not be published.

Social Media Auto Publish Powered By : XYZScripts.com