Biss Boss 6 : ಹೆತ್ತವರನ್ನು ಕಂಡು ಕಂಬನಿ ಮಿಡಿದ ಸ್ಪರ್ಧಿಗಳು – ನವೀನ್ ತಾಯಿಗೆ ಕೇಳಿದ ಪ್ರಶ್ನೆ ಏನು ಗೊತ್ತಾ..?

ಹೆತ್ತವರನ್ನು ಕಂಡ ಕರಳು ಬಳ್ಳಿಗಳು ಕಂಬನಿ ಮಿಡಿದ ಸ್ಪರ್ಧಿಗಳು, ನಿನ್ನೆ ಬಿಗ್ ಬಾಸ್ ನೋಡಿದವರ ಹೃದಯ ತಾಕುವಂತಿದ್ದವು. ಬಿಗ್ ಬಾಸ್ ಆರಂಭವಾದಾಗಿನಿಂದ ಅಂದರೆ ಸರಿಸುಮಾರು 80 ದಿನಗಳಿಂದ ಮನೆಯ ಸದಸ್ಯರನ್ನು ಕಾಣದೆ, ಮಾತನಾಡದೆ, ಅವರ ಧ್ವನಿ ಕೇಳದೇ ಇದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಸರ್ಪ್ರೈಸ್ ನೀಡಿದರು. ಎಂದಿನಂತೆ ದಿನ ಪ್ರಾರಂಭಿಸಿದ ಸ್ಪರ್ಧಿಗಳಿಗೆ ಮನೆಯ ಸದಸ್ಯರನ್ನು ಕಾಣುವ ಯಾವ ಕಲ್ಪನೆ ಕೂಡ ಇರಲಿಲ್ಲ. ಹೀಗಿರುವಾಗ ಸಡನ್ ಎಂಟ್ರಿ ಕೊಟ್ಟಿದ್ದ ನವೀನ್ ತಾಯಿಯನ್ನು ಕಂಡು ಮನೆಯ ಸದಸ್ಯರು ಸಂತಸಗೊಂಡರು. ತಾಯಿಯನ್ನ ಕಂಡ ನವೀನ್ ಮನೆಸಯ ಸದಸ್ಯರ ಆರೋಗ್ಯ ವಿಚಾರಿಸಿ ನಂತರ ಕೇಳಿದ್ದು ಯಾವ ವಿಚಾರ ಗೊತ್ತಾ..? ‘‘ಅಮ್ಮ ಮನೆ ಬಾಡಿಗೆಗೆ ಏನ್ ಮಾಡ್ತಾಯಿದ್ದೀಯಾ..?’ ಅಂತ ಕೇಳಿದರು.

ಈ ಪ್ರಶ್ನೆ ಒಬ್ಬ ಮಗನಿಗೆ ಇರುವ ಜವಬ್ದಾರಿ ಹಾಗೂ ಹೆತ್ತವರ ಮೇಲಿರುವ ಪ್ರತೀತಿ, ಕಾಳಜಿ ಎದ್ದು ಕಾಣುತ್ತಿತ್ತು. ಕಣ್ತುಂಬಿಕೊಂಡ ತಾಯಿ ‘ನೀನು ಮನೆಯ ಬಗ್ಗೆ ಯೋಚನೆ ಮಾಡಬೇಡ, ಆಟದ ಕಡೆಗೆ ಗಮನ ಕೊಡು, ಎಲ್ಲರೊಂದಿಗೆ ಬೆರೆತಿರು, ಜನ ನಿನ್ನ ಇಷ್ಟ ಪಡುತ್ತಿದ್ದಾರೆ’ ಎಂದು ಹೇಳಿ ಹೊರನಡೆದರು.

ಇನ್ನೂ ಅಕ್ಷತಾ ಅವರ ತಾಯಿ ಕೂಡ ಬಿಗ್ ಬಾಸ್ ಮನೆಗೆ ಬಂದು ಮಗಳನ್ನು ಕಂಡು ಕಂಬನಿ ಮಿಡಿದರು. ತಾಯಿ ಮಗಳು ಎಷ್ಟೋ ದಿನಗಳ ಮೇಲೆ ಕಂಡು ಖುಷಿ ಪಟ್ಟ ಆ ದೃಶ್ಯಗಳು ನೋಡುಗರ ಮನ ಕಲುಕುವಂತಿದ್ದವು.

ಇನ್ನೂ ಶಶಿ ಅವರ ಸಹೋದರಿಯ ಪುಟ್ಟ ಮಗು ಮತ್ತು ಭಾವ ಮನೆಗೆ ಬಂದಿದ್ದು ಮನೆಯ ಎಲ್ಲಾ ಸದಸ್ಯರ ಮೂಡ್ ಚೇಚ್ ಮಾಡ್ತು. ಮಗುವನ್ನು ಎತ್ತಿಕೊಂಡು ಆಟವಾಡಿದ ಮನೆಯ ಸದಸ್ಯರು ಕೊಂಚ ಹೊತ್ತು ಎಂಜಾಯ್ ಮಾಡಿದರು.

Leave a Reply

Your email address will not be published.

Social Media Auto Publish Powered By : XYZScripts.com