ಧೋನಿ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಪಂತ್ – ಐಸಿಸಿ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನ ಪಡೆದ ರಿಷಭ್

ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್, ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಆಟಗಾರರ ರ್ಯಾಂಕಿಂಗ್ ಪಟ್ಟಿಯಲ್ಲಿ 673 ಪಾಯಿಂಟ್ಸ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಇದುವರೆಗೆ ಭಾರತೀಯ ವಿಕೆಟ್ ಕೀಪರ್ ಒಬ್ಬರು ಪಡೆದಿರುವ ಅತಿ ಹೆಚ್ಚು ಪಾಯಿಂಟ್ಸ್ ಇದಾಗಿದೆ.

ರ್ಯಾಂಕಿಂಗ್ ಪಟ್ಟಿಯಲ್ಲಿ ಒಮ್ಮೆಲೇ 21 ಸ್ಥಾನಗಳನ್ನು ನೆಗೆದಿರುವ ರಿಷಭ್ ಪಂತ್ 17ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ 21 ವರ್ಷ ವಯಸ್ಸಿನ ರಿಷಭ್ ಪಂತ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಹಿಂದಿಕ್ಕಿದ್ದಾರೆ.

ಧೋನಿ ತಮ್ಮ ಟೆಸ್ಟ್ ಕ್ರಿಕೆಟ್ ಕರಿಯರ್ ನಲ್ಲಿ ಗರಿಷ್ಟ 662 ಅಂಕ ಗಳಿಸಿ, ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ 19ನೇ ಸ್ಥಾನ ಪಡೆದಿದ್ದರು. ಮಾಜಿ ಕ್ರಿಕೆಟರ್ ಫಾರೂಖ್ ಇಂಜಿನಿಯರ್ ಗರಿಷ್ಟ 619 ಅಂಕ ಗಳಿಸಿದ್ದರು.

 

Leave a Reply

Your email address will not be published.