ಜನೆವರಿ 15ರಂದು ಪ್ರಯಾಗ್‍ರಾಜ್ ನಲ್ಲಿ ಕುಂಭಮೇಳ – ಸುಮಾರು 12 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಜನವರಿ 15 ರಂದು ನಡೆಯುವ ಕುಂಭಮೇಳದಲ್ಲಿ ಸುಮಾರು 12 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

ಕುಂಭಮೇಳದಲ್ಲಿ ಭಾಗವಹಿಸಲು ಭಾರತ ಸೇರಿದಂತೆ ವಿದೇಶದಿಂದಲೂ ಜನ ಬರಲಿದ್ದಾರೆ. ವಸತಿ, ಶೌಚಾಲಯ, ವಿದ್ಯುತ್ ಸೇರಿದಂತೆ ಮೂಲ ಭೂತ ಸೌಲಭ್ಯಗಳಿಗೆ 4300 ಕೋಟಿ ಖರ್ಚು ಮಾಡಲಾಗಿದೆ. ಈಗಾಗಲೇ ಈ ಸ್ಥಳಕ್ಕೆ ಹಲುವು ಗಣ್ಯರು ಭೇಟಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಚಿವ ಸುರೇಶ್ ರಾಣಾ, ಈಗಾಗಲೇ ಎಲ್ಲ ರಾಜ್ಯದ ರಾಜ್ಯಪಾಲರಿಗೆ, ಮುಖ್ಯ ಮಂತ್ರಿಗಳಿಗೆ, ಆರು ಲಕ್ಷ ಊರುಗಳಿಗೆ, 192 ದೇಶಗಳಿಗೆ ಕುಂಭಮೇಳದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಮಕರ ಸಂಕ್ರಾತಿಯಂದು ಆರಂಭವಾಗುವ ಕುಂಭಮೇಳ ಶಿವರಾತ್ರಿಯಂದು ಮುಗಿಯಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ಅವನೀಶ್ ಕುಮಾರ್, ಕುಂಭ ಮೇಳದ ವೆಬ್ ಸೈಟ್, ನೂತನ ವರ್ಷದಲ್ಲಿ ಟ್ರೆಂಡಿಂಗ್ ಸೈಟ್ ಗಳಲ್ಲಿ ಸ್ಥಾನ ಪಡೆದಿದೆ. ಇದೇ ವೇಳೆ ಭಕ್ತರಿಗೆ ಅಕ್ಷಯ ವಟವೃಕ್ಷ ಹಾಗೂ ಸರಸ್ವತಿ ಕೂಪ್ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಎರಡೂ ಸ್ಥಳಗಳು ಸೈನಾ ನಿಯಂತ್ರಣದಲ್ಲಿವೆ. ಭಕ್ತರ ದರ್ಶನಕ್ಕೆ ಪರವಾನಿಗೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

10 ಸಾವಿರ ಜನರ ಆಶ್ರಯಕ್ಕೆವ್ಯವಸ್ಥೆ ಮಾಡಲಾಗಿದ್ದು, ಇನ್ನು ಹತ್ತು ಸಾವಿರ ಜನರಿಗೆ ಪೆಂಡಾಲ್ ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವನೀಶ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com