NZ vs SL : ಟೇಲರ್, ನಿಕೋಲ್ಸ್ ಶತಕ – ನ್ಯೂಜಿಲೆಂಡ್ ಗೆ 115 ರನ್ ಜಯ ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಕಿವೀಸ್

ನೆಲ್ಸನ್ ನಲ್ಲಿರುವ ಸ್ಯಾಕ್ಸ್ಟನ್ ಓವಲ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ 115 ರನ್ ಅಂತರದ ಜಯ ದಾಖಲಿಸಿದೆ. ಇದರೊಂದಿಗೆ ಕೇನ್ ವಿಲಿಯಮ್ಸನ್ ಬಳಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಕ್ಲೀನ್ ಸ್ವೀಪ್ ಮಾಡಿದೆ.

ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಬೃಹತ್ ಮೊತ್ತ ಪೇರಿಸಿತು. ಕಿವೀಸ್ ಪರವಾಗಿ ರಾಸ್ ಟೇಲರ್ (137) ಹಾಗೂ ಹೆನ್ರಿ ನಿಕೋಲ್ಸ್ (124) ಶತಕ ಸಿಡಿಸಿದರು.

ಗೆಲ್ಲಲು 364 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ 41.4 ಓವರ್ ಗಳಲ್ಲಿ 249ಕ್ಕೆ ಆಲೌಟ್ ಆಯಿತು. ಲಂಕಾ ಪರವಾಗಿ ಅರ್ಧಶತಕ ದಾಖಲಿಸಿದ ತಿಸಾರಾ ಪೆರೆರಾ 80 ರನ್ ಗಳಿಸಿದರು. ಕಿವೀಸ್ ಬೌಲರ್ ಗಳಾದ ಲಾಕಿ ಫರ್ಗ್ಯೂಸನ್ 4 ಹಾಗೂ ಇಶ್ ಸೋಧಿ 3 ವಿಕೆಟ್ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com