ಹೊಸ ವರ್ಷದ ಆರಂಭದಲ್ಲಿಯೇ ಜೋರಾದ ಕನ್ನಡ ಚಿತ್ರಗಳ ಭರಾಟೆ

ಹೊಸ ವರ್ಷದ ಆರಂಬದಲ್ಲಿಯೇ ಕನ್ನಡ ಚಿತ್ರಗಳ ಭರಾಟೆ ಜೋರಾಗಿದೆ. ಸೂಪರ್‍ ಸ್ಟಾರ್‍ ನಟರ ಚಿತ್ರಗಳು ಸಾಲುಸಾಲಾಗಿ ಅಭಿಮಾನಿಗಳಿಗೆ ರಸದೌತಣ ಬಡಿಸಲು ಮುಂದಾಗಿವೆ.

ಅಭಿನಯ ಚಕ್ವರ್ತಿ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಸುದೀಪ್ ಅವರ ಲುಕ್‌ನಿಂದಲೇ ಅಭಿಮಾನಿಗಳ ಮನಗೆದ್ದಿರುವ, ಅವರಲ್ಲಿ ಕುತೂಹಲದ ಗೊಂಚಲನ್ನೇ ಇಟ್ಟಿರುವ ಪೈಲ್ವಾನ್‌ನ ಮೊದಲ ಕನ್ನಡ ಟೀಸರ್‍ (ತುಣುಕು) ಶೀಘ್ರವೇ ಬಿಡುಗಡೆ ಆಗಲಿದೆ.

ತಿಮ್ಮಪ್ಪನ ದರ್ಶನ ಮಾಡಿ, ಹೊಸ ವರ್ಷ ಸ್ವಾಗತಿಸಿದ ಕಿಚ್ಚ ಸುದೀಪ್

ಖುದ್ದು ಕಿಚ್ಚ ಸುದೀಪ್ ಅವರೇ ಘೋಷಣೆ ಮಾಡಿರುವಂತೆ (ಟ್ವಿಟರ್‌ನಲ್ಲಿ) ಪೈಲ್ವಾನ್ ಚಿತ್ರದ ಟೀಸರ್‍ ಸಂಕ್ರಾಂತಿಯಮದು (ಜ. 15) ಅನಾವರಣಗೊಳ್ಳಲಿದೆ.

ಸಂಕ್ರಾಂತಿಯಂದು ಸಂಜೆ 4.45ಕ್ಕೆ ಚಿತ್ರದ ಕನ್ನಡ ಟೀಸರ್ ಬಿಡುಗಡೆಯಾಗಲಿದೆ. ಇಡೀ ಚಿತ್ರತಂಡಕ್ಕೆ ಶುಭಾಶಯ ಎಂದು ಕಿಚ್ಚ ಹೇಳಿದ್ದಾರೆ.

ಕಿಚ್ಚ ಈ ಚಿತ್ರಕ್ಕಾಗಿ ಬರೋಬ್ಬರಿ 16 ಕೆಜಿ ದೇಹ ತೂಕ ಇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸೊಂಟದ ಸುತ್ತಳತೆಯನ್ನೂ 36 ಇಂಚಿನಿಂದ 31.5 ಇಂಚಿಗೆ ಇಳಿಸಿಕೊಂಡಿದ್ದಾರೆ.

ಚಿತ್ರದ ಹೆಸರೇ ಸೂಚಿಸುವಂತೆ ಇದು ಕುಸ್ತು ಪಟುವಿನ ಕಥೆಯುಳ್ಳ ಚಿತ್ರ. ಕುಸ್ತಿ ಪಟುವಾಗಿಯೇ ಅಭನಯಿಸುತ್ತಿರುವ ಕಿಚ್ಚ ಜಿಮ್‌ನಲ್ಲಿ ಕಸರತ್ತು ಮಾಡಿ ಬಾಡಿ ಶೇಪ್‌ನ್ನು ಬದಲಾಯಿಸಿಕೊಂಡಿದ್ದಾರೆ. 89 ಕೆಜಿ ಇದ್ದ ಸುದೀಪ್‌, ಇದೀಗ 73 ಕೆಜಿಗೆ ಇಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com