ತಲೆಮರೆಸಿಕೊಂಡ ಉದ್ಯಮಿ ವಿಜಯ್ ಮಲ್ಯ : ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್

ದೇಶದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಬಾಕಿಯಿರಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಮುಂಬೈಯ ಕೋರ್ಟ್ ಘೋಷಿಸಿದೆ.

ನೂತನ ವಂಚನೆ ವಿರೋಧಿ ಕಾನೂನಿನಡಿ ಆರ್ಥಿಕ ಅಪರಾಧಿ ಎಂದು ಘೋಷಿತರಾಗಿರುವ ಮೊದಲ ವ್ಯಕ್ತಿ ಇವರಾಗಿದ್ದಾರೆ. ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕೆಂದು ಕೋರಿ ಜಾರಿ ನಿರ್ದೇಶನಾಲಯದ ಅರ್ಜಿಯ ವಿಚಾರಣೆಯನ್ನು ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ನಡೆಸುತ್ತಿತ್ತು.

ಸಾವಿರಾರು ಕೋಟಿ ರೂ. ಬ್ಯಾಂಕ್‌ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿ ಈಗಿನ್ನು ಬ್ರಿಟನ್‌ ನಿಂದ ಭಾರತಕ್ಕೆ ಗಡೀಪಾರಾಗಲಿರುವ ಮದ್ಯ ದೊರೆಯನ್ನು ಪಿಎಂಎಲ್‌ಎ ನ್ಯಾಯಾಲಯ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.

ನ್ಯಾಯಾಲಯದ ಈ ಆದೇಶದಿಂದಾಗಿ ಅವರ ಎಲ್ಲ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರಕಾರಕ್ಕೆ ನೆರವಾಗಲಿದೆ.

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ತನಗೆ ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕಾಳಧನ ಸಕ್ರಮ ತಡೆ ಕಾಯ್ದೆ ಪ್ರಕಾರ ಈಗ ಸರ್ಕಾರಕ್ಕೆ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿದೆ. ಮಲ್ಯ ಅವರ ಒಡೆತನದ 12.5 ಸಾವಿರ ಕೋಟಿ ರು ಅಸ್ತಿ ಜಪ್ತಿ ಮಾಡಲು ತನಿಖಾ ಸಂಸ್ಥೆಗಳು ಮುಂದಾಗಿವೆ.

Leave a Reply

Your email address will not be published.