ಭಾರತ್ ಬಂದ್ ಹೆಸರಿನಲ್ಲಿ ಸಣ್ಣ ವ್ಯಾಪಾರಿಗಳಿಗೆ ಮತ್ತು ಜನರಿಗೆ ಮೋಸ..!

ಭಾರತ್  ಬಂದ್ ಗೆ ಕರೆ ಕೊಟ್ಟವರೇ ಎಂದಿನಂತೆ ಕೆಲಸಗಳಿಗಿಳಿದರೆ ಜನಸಾಮಾನ್ಯರಿಗೆ ಸುಳ್ಳು ಮಾಹಿತಿ ರವಾನೆ ಮಾಡಿದಂತೆ ಎಂದು ಸಣ್ಣ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಭಾರತ್ ಬಂದ್ ಮಾಡುವ ಅವಶ್ಯಕತೆ ಏನಿತ್ತು..? ಇದರಿಂದ ದಿನಗೂಲಿ ಕೆಲಸ ಮಾಡುವಂತವರು, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮೋಸ ಆಗಿದೆ ಎಂದು ನಗರದಲ್ಲಿ ಕೆಲ ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಂದು ಮತ್ತು ನಾಳೆ ಭಾರತ್ ಬಂದ್ ಎನ್ನುವ ಮಾತು ನಿನ್ನಿ ಕೇಳುತ್ತಿದ್ದಂತೆ ನಗರದಾದ್ಯಂತ ಜನ ಇಂದಿನ ಕೆಲಸಕ್ಕೆ ಬ್ರೇಕ್ ಹಾಕಿದ್ದರು. ಸಾಮಾನ್ಯವಾಗಿ ಭಾರತ್ ಬಂದ್ ಅಂದರೆ ಬಂದ್ ಪ್ರಭಾವ ಅತಿಯಾಗಿ ಇರಬಹುದು ಮತ್ತು ಬಸ್ ಗಳ ಒಡಾಟವಿಲ್ಲದೇ ಕೆಲಸ ಕಾರ್ಯಗಳಿಗೆ ಹೋಗುವುದು ತೊಂದರೆಯಾಗಬಹುದು ಎನ್ನುವ ಆಲೋಚನೆಯಲ್ಲಿದ್ದ ಜನರಿಗೆ ಎಂದಿನಂತೆ ಜನ ಜೀವನ ಇರುವುದನ್ನ ಕಂಡು ಬೇಸರವಾಗಿದೆ. ಇಂದಿನ ಕೆಲಸಕ್ಕೆ ಸಿಗುವ ಸಂಭಾವನೆ ಸುಖಾಸುಮ್ಮನೆ ಕಿತ್ತುಕೊಂಡಗಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇನ್ನೂ ಬಂದ್ ವಿಚಾರವಾಗಿ ರಸ್ತೆಗಿಳಿಯದ ಸರ್ಕಾರಿ ವಾಹನಗಳು ರಸ್ತೆಗಿಳಿದಿದ್ದು ಕೂಡ ಪ್ರಯಾಣಿಕರಿಲ್ಲದೆ ನಷ್ಟ ಅನುಭವಿಸುವಂತಾಗಿದೆ. ಕೇವಲ ಸರ್ಕಾರಿ ವಾಹನಗಳು ಮಾತ್ರವಲ್ಲ, ಮಾಲ್ ಗಳಿಗೂ , ದೊಡ್ಡ ದೊಡ್ಡ ಅಂಗಡಿ ಮುಗ್ಗಟ್ಟುಗಳಿಗೂ ಇದರ ಕಾವು ತಟ್ಟಿದೆ. ಎಂದಿನಂತೆ ತೆರೆದ ಮಾಲ್ ಗಳು ಮತ್ತು ಅಂಗಡಿ ಮುಗ್ಗಟ್ಟು ಗಳಲ್ಲಿ ಜನರಿಲ್ಲದೇ ಇರುವ ದೃಶ್ಯಗಳು ಸಾಮಾನ್ಯವಾಗಿದ್ದವು.

Leave a Reply

Your email address will not be published.

Social Media Auto Publish Powered By : XYZScripts.com