12 ವರ್ಷಗಳಲ್ಲೇ ಮೊದಲ ಬಾರಿಗೆ ಬಾಕ್ಸ್ ಆಫೀಸ್‌ನ ಟಾಪ್ 3 ಸ್ಥಾನಗಳನ್ನು ಆಳುತ್ತಿಲ್ಲ ಬಾಲಿವುಡ್ ಖಾನ್‌ಗಳು

2018ನೇ ಇಸವಿ ಬಾಲಿವುಡ್ ಖಾನ್‌ಗಳಿಗೆ ಅಕ್ಷರಶಃ ದುಸ್ವಪ್ನದ ವರ್ಷ. ಸಲ್ಮಾನ್ ಖಾನ್ ಅವರ ರೇಸ್ 3 ಅತಿಹೆಚ್ಚು ಟ್ರೋಲ್‌ಗೆ ಒಳಗಾಯಿತಷ್ಟೇ ಅಲ್ಲ, ಒಟ್ಟಾರೆ ಗಳಿಕೆ 166.4 ಕೋಟಿ ರೂ. ದಾಟಿಲಿಲ್ಲ. ಅಮೀರ್ ಖಾನ್ ಅವರ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರವು 151.19 ಕೋಟಿಗಿಂತ ಹೆಚ್ಚು ಗಳಿಸಲಾಗಲಿಲ್ಲ. ಶಾರುಖ್ ಖಾನ್ ಅವರ ಝೀರೋ ಚಿತ್ರಮಂದಿರಗಳಲ್ಲಿ ಇನ್ನೂ ಓಡುತ್ತಿದೆ, ಆದರೆ 88.5 ಕೋಟಿ ರೂ. ಅಷ್ಟೇ ಗಳಿಸಲು ಶಕ್ತವಾಗಿದೆ. 100 ಕೋಟಿ ರೂ. ಗಡಿ ದಾಟಲು ಹರಸಾಹಸ ಪಡುತ್ತಿದೆ.
ಈ ಎಲ್ಲಾ ಮೂವರು ಖಾನ್‌ಗಳ ಚಿತ್ರಗಳು ಈದ್, ದೀಪಾವಳಿ ಹಾಗೂ ಕ್ರಿಸ್‌ಮಸ್‌ನ ರಜಾದಿನಗಳಂದೇ ಬಿಡುಗಡೆಗೊಂಡಿದ್ದವು. ಆದರೂ ಫ್ಲಾಪ್ ಆಗಿವೆ. ಕಳೆದ 12 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಈ ಮೂವರಲ್ಲಿ ಒಬ್ಬರೂ ಬಾಕ್ಸ್ ಆಫೀಸ್ ಗಳಿಕೆಯ ಟಾಪ್ 3 ಸ್ಥಾನ ರಹಿತರಾಗಿದ್ದಾರೆ.
ಇದೇ ವೇಳೆ ರಣಬೀರ್ ಕಪೂರ್ ಅವರ ಸಂಜು ಚಿತ್ರ 342.53 ಕೋಟಿ ರೂ. ಗಳಿಕೆಯೊಂದಿಗೆ 2018ರ ಟಾಪ್ ಗಳಿಕೆ ಚಿತ್ರವಾಗಿ ಹೊರಹೊಮ್ಮಿದೆ. ರಣವೀರ್ ಸಿಂಗ್ ನಟನೆಯ ಪದ್ಮಾವತ್ 302.15 ಕೋಟಿ ಹಾಗೂ ಸಿಂಬಾ 173.15 ಕೋಟಿ ರೂ.ನೊಂದಿಗೆ 2 ಹಾಗೂ 3ನೇ ಸ್ಥಾನ ಅಲಂಕರಿಸಿವೆ..
ಇದಕ್ಕೂ ಮುನ್ನ 2006ರಲ್ಲಿ ಹೃತಿಕ್ ರೋಶನ್ ಅಭಿನಯದ ಧೂಮ್ 2 81 ಕೋಟಿ ರೂ. ಗಳಿಕೆಯೊಂದಿಗೆ ನಂ.1 ಹಾಗೂ ಸಂಜಯ್ ದತ್ ನಟನೆಯ ಲಗೇ ರಹೋ ಮುನ್ನಭಾಯಿ 75 ಕೋಟಿ ರೂ. ಗಳಿಕೆಯೊಂದಿಗೆ 2 ನೇ ಸ್ಥಾನ, ಹೃತಿಕ್ ಅಭಿನಯದ ಕೃಷಿ 72ನೇ ಸ್ಥಾನದೊಂದಿಗೆ 3ನೇ ಸ್ಥಾನದಲ್ಲಿದ್ದವು.
ಬಳಿಕ 2007ರಿಂದ 2017ರ ತನಕ ಬಾಕ್ಸ್ ಆಫೀಸ್ ನಾಯಕನಾಗಿ ಕನಿಷ್ಠ ಒಬ್ಬ ಖಾನ್‌ ಇದ್ದೇ ಇರುತ್ತಿದ್ದರು. ಇದೀಗ ಮತ್ತೆ ಖಾನ್‌ದಾನ್ ಇಲ್ಲದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com