ವಯಸ್ಸಿನ ಹುಡುಗನೊಂದಿಗೆ ಆಂಟಿ ಕಳ್ಳಾಟ : ಆಕ್ಷೇಪಿಸಿದ ಪತಿ ಕೊಲೆಗೆ ಪತ್ನಿಯೇ ಕೊಟ್ಳು ಸುಪಾರಿ

ವಯಸ್ಸಿನ ಹುಡುಗನೊಂದಿಗೆ ಕಳ್ಳಾಟವಾಡುತ್ತಿದ್ದ 10 ವರ್ಷದ ಮಗನಿರುವ ಆಂಟಿ ಪತಿ ಕೊಲೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಸುಪಾರಿ ನಿಡಿದ್ದ ಪತ್ನಿ ಸೇರಿ ಆರು ಆರೋಪಿಗಳನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಮನೆಯ ಮಾಲೀಕನ ಮಗನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಬಿಟಿಎಸ್‌ ಲೇಔಟ್‌ ನಿವಾಸಿ ಮಮತಾ ಎಂಬ ಮಹಿಳೆ, ತನ್ನ ಪತಿ ನಾಗರಾಜ್ ನನ್ನು ಹತ್ಯೆಗೈಯ್ಯಲು ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದಳು. ಪತಿ ಹತ್ಯೆಗಾಗಿ 1.5 ಲಕ್ಷ ರೂ ಸುಪಾರಿ ನೀಡಿದ್ದಳು.

ನಾಗರಾಜ್ ಮನೆಗೆ ನುಗ್ಗಿದ ಆರೋಪಿಗಳು ಆತನ ಹತ್ಯೆಗೆ ಯೋಜನೆ ಹಾಕಿದ್ದರು. ಆದರೆ ಆರೋಪಿಗಳು ಮನೆಗೆ ನುಗ್ಗಿದ್ದ ಸಂದರ್ಭದಲ್ಲೇ ಕುಡಿಯುವ ನೀರಿನ ಕ್ಯಾನ್‌ ಕೊಡಲು ಡೆಲಿವರ್‌ ಬಾಯ್‌ ಬಂದ ಕಾರಣ ಕೇವಲ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ನಾಗರಾಜ್‌, ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಘಟನೆ ನಡೆದ ಮರುದಿನದಿಂದಲೇ ಮಮತಾ ಹಾಗೂ ಪ್ರಶಾಂತ್‌ ನಾಪತ್ತೆಯಾಗಿದ್ದರು. ಪತ್ನಿ ಮಮತಾ ಮನೆಗೆ ವಾಪಸ್ ಆಗಿಲ್ಲ ಎಂದೂ ಹಾಗೂ ಮನೆ ಓನರ್ ಮಗ ಪ್ರಶಾಂತ್(20) ಸಹ ಕಾಣಿಸುತ್ತಿಲ್ಲ ಎಂದು ನಾಗರಾಜ್ ದೂರು ತಿಳಿಸಿದ್ದರು.

ಪ್ರಕರಣ ದಾಖಲುಸಿಕೊಂಡ ಹುಳಿಮಾವು ಪೊಲೀಸರು ಮಮತಾ ಹಾಗೂ ಪ್ರಶಾಂತ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪತಿ ಹತ್ಯೆಯ ಸಂಚು ರೂಪಿಸಿರುವ ಬಗ್ಗೆ ಬಾಯ್ಬಿಟ್ಟಿದ್ದಳು.

ಪೇಂಟರ್‌ ಕೆಲಸ ಮಾಡುತ್ತಿದ್ದ ನಾಗರಾಜ ಹಾಗೂ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿರುವ ಮಮತಾ 11 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ 10 ವರ್ಷದ ಮಗನಿದ್ದಾನೆ. 7 ತಿಂಗಳ ಹಿಂದಷ್ಟೇ ಮನೆ ಬದಲಿಸಿ ಬಿಟಿಎಸ್‌ ಲೇಔಟ್‌ನಲ್ಲಿರುವ ಚಂದ್ರಶೇಖರ್‌ ಎಂಬುವರ ಮನೆಗೆ ಬಾಡಿಗೆಗೆ ಹೋಗಿದ್ದರು. ಮನೆ ಮಾಲೀಕರ ಪುತ್ರ 20 ವರ್ಷದ ಪ್ರಶಾಂತ ಮತ್ತು ಮಮತಾ ನಡುವೆ ಪರಿಚಯ, ಸ್ನೇಹವು ಅಕ್ರಮ ಸಂಬಂಧದವರೆಗೂ ಮುಂದುವರಿದಿತ್ತು. ಈ ವಿಷಯ ಇತ್ತೀಚೆಗೆ ನಾಗರಾಜ್‌ ಗೆ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿರುವ ನಾಗರಾಜ್‌ನನ್ನು ಹತ್ಯೆಮಾಡಲು ಮಮತಾ ಹಾಗೂ ಪ್ರಶಾಂತ್ ಸಂಚು ರೂಪಿಸಿದ್ದರು.
ಪ್ರಕರಣ ಸಂಬಂಧ ಪ್ರಶಾಂತ (20)ನ ಸ್ನೇಹಿತರಾದ ಗುರಪ್ಪನಪಾಳ್ಯದ ಅನಿಲ್‌ ಬಿಸ್ವಾಸ್‌ (21), ಜಾಕೀರ್‌ ಪಾಷಾ (20), ಹರೀಶ್‌ ಕುಮಾರ್‌ (20) ಹಾಗೂ ಬಾಲಕನೊಬ್ಬನನ್ನು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com