ಧ್ವನಿಪೆಟ್ಟಿಗೆ ಕಳೆದುಕೊಂಡವರಿಗೆ ವೈದ್ಯರೊಬ್ಬರು ನೆರವು : ಬಡ ರೋಗಿಗಳಿಗೆ ಕಡಿಮೆ ವೆಚ್ಚದ `ಧ್ವನಿ ಕೊಳವೆ’

ನಗರದ ವೈದ್ಯರೊಬ್ಬರು ಜಸ್ಟ್ 50 ರೂ.ಗೆ ಧ್ವನಿ ಪಟ್ಟಿಗೆ ಸಮಸ್ಯೆ ನಿವಾರಣೆ ಮಾಡುವ ಮೂಲಕ ವೈದ್ಯೋ..ನಾರಾಯಣೋ ಹರಿ…ಎಂಬುದನ್ನು ಸಾರ್ಥಕ ಮಾಡಿದ್ದಾರೆ. ಹೌದು ಗಂಟಲು ಕ್ಯಾನ್ಸರ್ ನಿಂದ `ಧ್ವನಿಪೆಟ್ಟಿಗೆ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿರುವವರ ನೆರವಿಗೆ ನಗರದ ವೈದ್ಯರು ಸಾತ್ ನೀಡಿದ್ದಾರೆ.

ಗಂಟಲು ಅಥವಾ ಯಾವುದೇ ಶಸ್ತ್ರಚಿಕಿತ್ಸೆ ನಂತರ ಮಾತನಾಡಲು,ಉಸಿರಾಡಲು ಅನುಕೂಲವಾಗುವ ಕೃತಕ ಧ್ವನಿ ಕೊಳವೆಗಾಗಿ ರೋಗಿಗಳು ಈತನಕ ಸಾವಿರಾರೂ ರೂ. ವ್ಯಯಮಾಡುತ್ತಿದ್ದರು. ಆದರೆ ಇದೀಗ ನಗರದ ವೈದ್ಯರ ಪರಿಶ್ರಮದ ಫಲವಾಗಿ ಈ ಸಾಧನ ಕೈಗೆಟಕುವ ಬೆಲೆಯಲ್ಲಿ ಸಿಗುವಂತಾಗಿದೆ.

ಕೇವಲ 20ರಿಂದ 25ಸಾವಿರ ರೂ. ವೆಚ್ಚ ತಗುಲುವ ವಿದೇಶದ ವಾಯ್ಸ್ ಪ್ರೋಸ್ತೇಥಿಸ್ಗೆ ಪರ್ಯಾಯವಾಗಿ ಬಡ ರೋಗಿಗಳಿಗೆ ವರದಾನವಾಗುವಂತೆ, ಅತಿ ಕಡಿಮೆ ದುಡ್ಡಿನಲ್ಲಿ ಅಂದರೆ ಕೇವಲ 50 ರೂ.ಗಳಿಗೆ `ಧ್ವನಿ ಕೊಳವೆಯನ್ನು ಬೆಂಗಳೂರಿನ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಯು.ಎಸ್.ವಿಶಾಲ್ ರಾವ್ ಅವರು ಅಭಿವೃದ್ಧಿಪಡಿಸಿದ್ದಾರೆ. ಆ ಮೂಲಕ ಸಹಸ್ರಾರು ಬಡ ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಏನಿದು ಧ್ವನಿ ಕೊಳವೆ ಅಂದರೆ, ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಗಂಟಲು ಕ್ಯಾನ್ಸರ್ಗೆ ತುತ್ತಾದರೆ ಆತನ `ಧ್ವನಿ ಪೆಟ್ಟಿಗೆ ತೆಗೆಯಲಾಗುತ್ತದೆ. ಆ ಜಾಗದಲ್ಲಿ ಕೃತಕ ಉಸಿರಾಡಲು ಅನುಕೂಲವಾಗುವಂತೆ ಕೊಳವೆಯಾಕಾರದಲ್ಲಿರುವ ವಾಯ್ಸ್ ಪ್ರೋಸ್ತೇಥಿಸ್ ಬಳಸಲಾಗುತ್ತದೆ. ಕಳೆದ ಹತ್ತಾರು ವರ್ಷಗಳಿಂದ ವೈದ್ಯರು ಇದನ್ನು ಬಳಸುವುದನ್ನು ರೂಢಿಸಿಕೊಂಡಿದ್ದು, ಆ ಮೂಲಕ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆ ರೋಗಿಗಳಿಗೆ ಕೊಳವೆಯನ್ನು ಅಳವಡಿಸಿದರೆ ಅವರು ಮೊದಲಿನಂತೆ ಮಾತನಾಡಲು ಸಾಧ್ಯವಿಲ್ಲ. ಆದರೆ ಗೊಗ್ಗರು ಧ್ವನಿಯಲ್ಲಿ ಮಾತನಾಡಬಹುದು. ನಾನಾ ಬಗೆಯ ವಾಯ್ಸ್ ಪ್ರೋಸ್ತೇಥಿಸ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬಹುತೇಕ ಅವುಗಳನ್ನು ಅಭಿವೃದ್ಧಿಪಡಿಸಿರುವುದು ಹೊರ ದೇಶಗಳೇ. ಅವುಗಳ ಬೆಲೆ ಕಂಪನಿ ಹಾಗೂ ಯಾವ ದೇಶದ್ದು ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕನಿಷ್ಠ 20ಸಾವಿರದಿಂದ 40ಸಾವಿರದವರೆಗೆ ವಾಯ್ಸ್ ಪ್ರೋಸ್ತೇಥಿಸ್ ಲಭ್ಯವಿದೆ. ಆದರೆ ಶ್ರೀಮಂತರು ಎಷ್ಟು ಖರ್ಚಾದರೂ ತಲೆಕೆಡಿಸಿಕೊಳ್ಳದೆ, ಕೃತಕ ಕೊಳವೆ ಹಾಕಿಸಿಕೊಳ್ಳುತ್ತಾರೆ. ಆದರೆ ಬಡವರಿಗೆ ವಾಯ್ಸ್ ಪ್ರೋಸ್ತೇಥಿಸ್ ಹಾಕಿಸಿಕೊಳ್ಳುವುದೇ ಒಂದು ಬೇನೆ. ಅಂತಹ ನೂರಾರು ಬಡ ರೋಗಿಗಳ ಇಂಗಿತವನ್ನು ಅರಿತಿರುವ ವೈದ್ಯ ವಿಶಾಲ್ರಾವ್ ಕಡಿಮೆ ಬೆಲೆಯ ಹಾಗೂ ಉತ್ತಮ ಗುಣಮಟ್ಟದ ಸರಳವಾದ ವಾಯ್ಸ್ ಪ್ರೋಸ್ತೇಥಿಸ್ ಅಭಿವೃದ್ಧಿಪಡಿಸಿದ್ದಾರೆ.
ಪೇಟೆಂಟ್ ಪಡೆಯಲು ತಯಾರಿ:

ವಾಯ್ಸ್ ಪ್ರೋಸ್ತೇಥಿಸ್ ಬಳಕೆಯಲ್ಲೂ ಯಶಸ್ಸು ಸಾಸಿರುವ ವೈದ್ಯರು, ಕಾನೂನು ಪ್ರಕಾರ ಅದಕ್ಕೆ ಪೇಟೆಂಟ್ ಪಡೆದು ಅದನ್ನು ಮಾರುಕಟ್ಟೆಗೆ ಅಕೃತವಾಗಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದ್ದಾರೆ.ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ.ಒಮ್ಮೆ ಕಡಿಮೆ ವೆಚ್ಚದ ಕೃತಕ ಕೊಳವೆಗೆ ಪೇಟೆಂಟ್ ದೊರೆತರೆ ಅದು ರಾಜ್ಯದ ಅಷ್ಟೇ ಅಲ್ಲ ಇಡೀ ವಿಶ್ವದ ಬಡ ಗಂಟಲು ಕ್ಯಾನ್ಸರ್ ರೋಗಿಗಳ ಪಾಲಿಗೆ `ಸಂಜೀವಿನಿ’ಯಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com